ಆಗಸ್ಟ್ ಕೊನೆಯ ವೇಳೆಗೆ ಅಫ್ಘಾನ್ ನಿಂದ ಎಲ್ಲ ಅಮೆರಿಕ ಸೈನಿಕರು ವಾಪಸ್: ಶ್ವೇತಭವನ
ವಾಶಿಂಗ್ಟನ್, ಜು. 3: ಅಫ್ಘಾನಿಸ್ತಾನದಲ್ಲಿರುವ ತನ್ನ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ಕಾರ್ಯವನ್ನು ಅಮೆರಿಕವು ಆಗಸ್ಟ್ ಕೊನೆಯ ವೇಳೆಗೆ ಮುಗಿಸುವುದು ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಅಫ್ಘಾನಿಸ್ತಾನದ ಅತಿ ದೊಡ್ಡ ವಾಯು ನೆಲೆ ಬಗ್ರಾಮ್ನಿಂದ ಎಲ್ಲ ಅಮೆರಿಕ ಸೈನಿಕರು ಹೊರಹೋಗಿದ್ದಾರೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ, ಕೆಲವೇ ದಿನಗಳಲ್ಲಿ ಅಮೆರಿಕದ ಸೈನಿಕರು ವಾಪಸಾಗಲಿದ್ದಾರೆ ಎಂಬ ನಿರೀಕ್ಷೆಗಳು ವ್ಯಾಪಕವಾಗಿ ಹುಟ್ಟಿಕೊಂಡಿದ್ದವು.
ಆದರೆ, ಅಮೆರಿಕ ಸೈನಿಕರು ಆಗಸ್ಟ್ ಕೊನೆಯ ವೇಳೆಗೆ ಅಫ್ಘಾನಿಸ್ತಾನದಿಂದ ಸಂಪುರ್ಣವಾಗಿ ಹೊರಹೋಗಲಿದ್ದಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ತಿಳಿಸಿದರು.
Next Story