ರಾಜ್ಯ ಸರಕಾರದ ಆದೇಶ ಪಾಲನೆ: ದ.ಕ.ಜಿಲ್ಲಾಧಿಕಾರಿ ಸ್ಪಷ್ಟನೆ
ಜು.4ರಂದು ವೀಕೆಂಡ್ ಕರ್ಫ್ಯೂ

ಮಂಗಳೂರು, ಜು.3: ಈಗಾಗಲೆ ರಾಜ್ಯ ಸರಕಾರವು ಜು.5ರಿಂದ ಅನ್ವಯಗೊಂಡಂತೆ ಲಾಕ್‌ಡೌನ್‌ನಲ್ಲಿ ಸಾಕಷ್ಟು ಸಡಿಲಿಕೆ ಮಾಡಿದೆ. ಅದನ್ನು ದ.ಕ.ಜಿಲ್ಲೆಯಲ್ಲೂ ಯಥಾವತ್ತಾಗಿ ಪಾಲಿಸಲಾಗುವುದು ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ತಿಳಿಸಿದ್ದಾರೆ.
ಜು.4ರ ರವಿವಾರ ವೀಕೆಂಡ್ ಕರ್ಫ್ಯೂ ಇದೆ. ಆದರೆ ಈಗಾಗಲೆ ತಿಳಿಸಿದಂತೆ ರವಿವಾರ ಬೆಳಗ್ಗೆ 6ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗುವುದು. ಜು.5ರ ಬೆಳಗ್ಗೆ 5ರಿಂದ ಜು.19ರ ಬೆಳಗ್ಗೆ 5ರವರೆಗೆ ರಾಜ್ಯ ಸರಕಾರ ಹೊರಡಿಸಿದ ಸಡಿಲಿಕೆ ಮತ್ತು ನಿರ್ಬಂಧಗಳು ಜಿಲ್ಲೆಯಲ್ಲಿ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
Next Story





