ಫಿಲಿಪೈನ್ಸ್: 92 ಜನರನ್ನು ಹೊತ್ತ ಮಿಲಿಟರಿ ವಿಮಾನ ಪತನ, ಕನಿಷ್ಠ 17 ಮಂದಿ ಮೃತ್ಯು

Photo: Twitter/@AlertsPea
ಕೊಟಾಬಾಟೊ: ದಕ್ಷಿಣ ಫಿಲಿಪೈನ್ಸ್ನಲ್ಲಿ ಕನಿಷ್ಠ 92 ಜನರನ್ನು ಹೊತ್ತ ಮಿಲಿಟರಿ ವಿಮಾನವೊಂದು ರವಿವಾರ ಪತನವಾಗಿದ್ದು, ಘಟನೆಯಲ್ಲಿ ಕನಿಷ್ಠ 17 ಮಂದಿ ಮೃತಪಟ್ಟಿದ್ದಾರೆ ಎಂದು The New York Times ವರದಿ ಮಾಡಿದೆ.
ಫಿಲಿಪೈನ್ ವಾಯುಪಡೆಯ (ಪಿಎಎಫ್) ಸಿ -130 ವಿಮಾನದ ಭಗ್ನಾವಶೇಷದಿಂದ ಇಲ್ಲಿಯವರೆಗೆ ಕನಿಷ್ಠ 40 ಜನರನ್ನು ರಕ್ಷಿಸಲಾಗಿದೆ. ಸುಲು ಪ್ರಾಂತ್ಯದ ಜೊಲೋ ದ್ವೀಪಕ್ಕೆ ಇಳಿಯಲು ಪ್ರಯತ್ನಿಸುತ್ತಿದ್ದಾಗ ವಿಮಾನವು ಅಪಘಾತಕ್ಕೀಡಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಜನರಲ್ ಸಿರಿಲಿಟೊ ಸೊಬೆಜಾನಾ ಎಎಫ್ಪಿಗೆ ತಿಳಿಸಿದ್ದಾರೆ.
ಹೆಚ್ಚಿನ ಪ್ರಯಾಣಿಕರು ಇತ್ತೀಚೆಗೆ ಮೂಲಭೂತ ಮಿಲಿಟರಿ ತರಬೇತಿಯಿಂದ ಪದವಿ ಪಡೆದಿದ್ದರು. ಭಯೋತ್ಪಾದನೆ ವಿರುದ್ಧ ಹೋರಾಡುವ ಜಂಟಿ ಕಾರ್ಯಪಡೆಯ ಭಾಗವಾಗಿ ದ್ವೀಪವೊಂದಕ್ಕೆ ನಿಯೋಜಿಸಲಾಗಿತ್ತು.
ದಕ್ಷಿಣ ಫಿಲಿಪೈನ್ಸ್ನಲ್ಲಿ ಭಾರೀ ಸಂಖ್ಯೆಯಲ್ಲಿ ಮಿಲಿಟರಿಯನ್ನು ನಿಯೋಜಿಸಲಾಗಿದೆ. ಅಲ್ಲಿ ಹಲವಾರು ಭಯೋತ್ಪಾದಕ ಗುಂಪುಗಳು ಕಾರ್ಯನಿರ್ವಹಿಸುತ್ತಿವೆ ಎಂದು ವರದಿಯಾಗಿದೆ.
Next Story