ಕೋಮು ದ್ವೇಷ ಹರಡಿದ್ದಕ್ಕಾಗಿ ಟ್ವಿಟರ್ ಇಂಡಿಯಾ ಮುಖ್ಯಸ್ಥರ ವಿರುದ್ಧ ದೂರು ದಾಖಲು

photo: facebook
ಹೊಸದಿಲ್ಲಿ: ಕೋಮು ದ್ವೇಷವನ್ನು ಹರಡಿದ ಆರೋಪದ ಮೇಲೆ ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ಹಾಗೂ ಸರಕಾರೇತರ ಸಂಸ್ಥೆ(ಎನ್ ಜಿಒ) ವಿರುದ್ಧ ದಿಲ್ಲಿ ಪೊಲೀಸ್ ಸೈಬರ್ ಸೆಲ್ ಗೆ ದೂರು ದಾಖಲಿಸಲಾಗಿದೆ.
ವಕೀಲ ಆದಿತ್ಯ ಸಿಂಗ್ ದೇಶ್ವಾಲ್ ಅವರು ದೂರು ಸಲ್ಲಿಸಿದ್ದಾರೆ. ಟ್ವಿಟರ್ ಕಮ್ಯುನಿಕೇಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಟ್ವಿಟರ್ ಇಂಡಿಯಾದ ಎಂಡಿ, ಮನೀಶ್ ಮಹೇಶ್ವರಿ, ಟ್ವಿಟರ್ ಇಂಡಿಯಾದ ಸಾರ್ವಜನಿಕ ನೀತಿ ವ್ಯವಸ್ಥಾಪಕ ಶಗುಫ್ತಾ ಕಮ್ರಾನ್, ರಿಪಬ್ಲಿಕ್ ಎಥೀಸ್ಟ್ ಸ್ಥಾಪಕ, ಸಿಇಒ ಅರ್ಮಿನ್ ನವಾಬಿ ಹಾಗೂ ಸುಸನ್ನಾ ಮ್ಯಾಕಿಂಟ್ರಿ ವಿರುದ್ಧ ಎಫ್ಐಆರ್ ನೋಂದಣಿ ಮಾಡುವಂತೆ ದಿಲ್ಲಿ ಪೊಲೀಸರ ಡಿಸಿಪಿ ಸೈಬರ್ ಸೆಲ್ಗೆ ಕೋರಿದ್ದಾರೆ.
ರಿಪಬ್ಲಿಕ್ ಎಥೀಸ್ಟ್ ಹಂಚಿಕೊಂಡ ಕಾಳಿ ದೇವಿಯ ಚಿತ್ರವನ್ನು ವಕೀಲರು ಉಲ್ಲೇಖಿಸಿದ್ದಾರೆ ಹಾಗೂ ಟ್ವಿಟರ್ ಬಳಕೆದಾರರು ಪೋಸ್ಟ್ ಮಾಡಿದ ವಿಷಯವು ನಿಂದನೀಯ ಮಾತ್ರವಲ್ಲ ಕಿರಿಕಿರಿ, ಅನಾನುಕೂಲತೆ, ಅಪಾಯ, ಅಡಚಣೆ, ಅವಮಾನ, ನೋವು, ಕ್ರಿಮಿನಲ್ ಬೆದರಿಕೆ, ಸಮಾಜದಲ್ಲಿ ದ್ವೇಷ ಗಳನ್ನು ಉಂಟುಮಾಡುವ ಉದ್ದೇಶದಿಂದ ಪೋಸ್ಟ್ ಮಾಡಲಾಗಿದೆ ಎಂದು ದೂರಿದ್ದಾರೆ.





