ತುಳು ಭಾಷೆ ಸಂವಿಧಾನದ 8ನೆಯ ಪರಿಚ್ಛೇದಕ್ಕೆ ಸೇರಿಸಲು ಸಿ.ಟಿ.ರವಿ ಒತ್ತಾಯ

ಬೆಂಗಳೂರು, ಜು. 4: `ಹದಿನೈದನೆಯ ಶತಮಾನದವರೆಗೆ ತನ್ನ ಸ್ವಂತ ಲಿಪಿಯನ್ನು ಹೊಂದಿದ್ದ ಭಾಷೆ ತುಳು. 19 ಲಕ್ಷಕ್ಕೂ ಅಧಿಕ ತುಳು ಮಾತೃಭಾಷಿಕರು ಆಡುವ ಹಾಗೂ ಮುಖ್ಯವಾಗಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಮತ್ತು ಮಡಿಕೇರಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಕೆಲ ಭಾಗಗಳಲ್ಲಿ ವ್ಯವಹಾರದ ಭಾಷೆಯಾಗಿ ಬಳಸಲ್ಪಡುವ ಭಾಷೆ ತುಳು' ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಸಿ.ಟಿ.ರವಿ ತಿಳಿಸಿದ್ದಾರೆ.
ರವಿವಾರ ಸರಣಿ ಟ್ವೀಟ್ ಮಾಡಿರುವ ಅವರು, `ಐತಿಹಾಸಿಕ ಹಾಗೂ ಸಾಂಸ್ಕೃತಿಕ ಅಸ್ಮಿತೆಯ ತುಳು ಭಾಷೆಯನ್ನು ಭಾರತ ಸಂವಿಧಾನದ 8ನೆಯ ಪರಿಚ್ಛೇದಕ್ಕೆ ಸೇರಿಸುವುದು ತುಳು ಭಾಷೆಯ, ಭಾಷಿಕರ ಸಂಸ್ಕೃತಿ ಹಾಗೂ ಸಾಂಸ್ಕೃತಿಕ ಅಸ್ಮಿತೆಯನ್ನು ಬೆಳೆಸುವಲ್ಲಿ ಹಾಗೆಯೇ ಇದು ತುಳು ಲಿಪಿಯ ಪುನರುತ್ಥಾನದಲ್ಲಿಯೂ ಪ್ರಮುಖ ಪಾತ್ರ ವಹಿಸಲಿದೆ' ಎಂದು ಇದೇ ವೇಳೆ ಪ್ರತಿಪಾದಿಸಿದ್ದಾರೆ.
ಐತಿಹಾಸಿಕ ಹಾಗೂ ಸಾಂಸ್ಕೃತಿಕ ಅಸ್ಮಿತೆಯ ತುಳು ಭಾಷೆಯನ್ನು ಭಾರತ ಸಂವಿಧಾನದ 8ನೆಯ ಪರಿಚ್ಛೇದಕ್ಕೆ ಸೇರಿಸುವುದು ತುಳು ಭಾಷೆಯ, ಭಾಷಿಕರ ಸಂಸ್ಕೃತಿ ಹಾಗೂ ಸಾಂಸ್ಕೃತಿಕ ಅಸ್ಮಿತೆಯನ್ನು ಬೆಳೆಸುವಲ್ಲಿ ಹಾಗೆಯೇ ಇದು ತುಳು ಲಿಪಿಯ ಪುನರುತ್ಥಾನದಲ್ಲಿಯೂ ಪ್ರಮುಖ ಪಾತ್ರ ವಹಿಸಲಿದೆ. #TuluTo8thSchedule
— C T Ravi ಸಿ ಟಿ ರವಿ (@CTRavi_BJP) July 4, 2021
2/2







