ಉಡುಪಿ : ಹಡಿಲು ಭೂಮಿ ಕೃಷಿ ಕಾರ್ಯಕ್ಕೆ ಸಚಿವ ಮಾಧುಸ್ವಾಮಿ ಚಾಲನೆ
'ಕೃಷಿ ಸಂಬಂಧ ತೋಡುಗಳ ಪುನಶ್ಚೇತನಕ್ಕೆ ನಬಾರ್ಡ್ ಅನುದಾನ'

ಉಡುಪಿ, ಜು.4: ಕರಾವಳಿ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಗದ್ದೆಗಳಿಗೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲು ನಬಾರ್ಡ್‌ನಿಂದ ಹಣ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಮುಂದಿನ ವರ್ಷಗಳಿಂದ ಅಂದಾಜು ಪಟ್ಟಿ ತಯಾರಿಸಿ ನೀರು ಹರಿದು ಹೋಗುವ ತೋಡು ಗಳ ಪುನಶ್ಚೇತನಕ್ಕೆ ಅನುದಾನ ಒದಗಿಸಲಾಗುವುದು ಎಂದು ರಾಜ್ಯ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧು ಸ್ವಾಮಿ ಹೇಳಿದ್ದಾರೆ.
ಕೇದಾರೋತ್ಥಾನ ಟ್ರಸ್ಟ್ ವತಿಯಿಂದ ರವಿವಾರ ಕಕ್ಕುಂಜೆ ಬೈಲಿನಲ್ಲಿ ಹಡಿಲು ಭೂಮಿ ಕೃಷಿ ನಾಟಿ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡುತಿದ್ದರು. ನದಿಯ ಸಿಹಿ ನೀರು ಮತ್ತು ಸಮುದ್ರ ನೀರು ಮಿಶ್ರಣ ವಾಗದಂತೆ ತಡೆಯುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಮಾರು 300 ಕೋಟಿ ರೂ. ವೆಚ್ಚದಲ್ಲಿ 410 ಕಿ.ಮೀ. ಉದ್ದದ ಕಾರ್‌ಲ್ಯಾಂಡ್ ಯೋಜನೆ ಜಾರಿಗೆ ತರಲಾ ಗುವುದು ಎಂದು ತಿಳಿಸಿದರು.
ಸರಕಾರ ಕೃಷಿಗೆ ವಿದ್ಯುತ್ ಹೊರತು ಉಳಿದ ಯಾವುದೇ ಸೌಲಭ್ಯಗಳನ್ನು ಕೊಡುತ್ತಿಲ್ಲ. ಅವುಗಳಿಗೆ ಕೃಷಿಕರೇ ಬಂಡವಾಳ ಹೂಡಬೇಕು. ಇದರಿಂದ ಕೃಷಿ ಲಾಭಾದಯಕವನ್ನಾಗಿಲ್ಲ. ಸರಕಾರದಿಂದ ಸೌಲಭ್ಯಗಳನ್ನು ನೀಡಿ ಕೃಷಿಯನ್ನು ಲಾಭಾದಾಯಕವ ನ್ನಾಗಿ ಮಾಡಿದರೆ ರೈತರಲ್ಲಿ ಆಸಕ್ತಿ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಕೆರೆಗಳನ್ನು ತುಂಬಿ ಕೊಳವೆ ಬಾವಿಗಳ ನೀರಿನ ಮಟ್ಟ ಸುಧಾರಣೆ ಮಾಡ ಬೇಕಾಗಿದೆ ಎಂದರು.
ದೇಶದಲ್ಲಿ ಜನಸಂಖ್ಯೆ ಮಾತ್ರ ವೃದ್ಧಿಯಾಗುತ್ತಿದೆ. ಆದರೆ ಭೂಮಿ ಮತ್ತು ನೀರು ಹೆಚ್ಚಾಗುತ್ತಿಲ್ಲ. ಆಹಾರೋತ್ಪಾದನೆ ಹೆಚ್ಚು ಮಾಡದಿದ್ದರೆ ಸಮಸ್ಯೆ ಎದು ರಾಗಲಿದೆ. ವೈಯಕ್ತಿಕ ಬದುಕಿಗೆ ಒತ್ತು ನೀಡಿ ಕೃಷಿ ಭೂಮಿಗಳನ್ನು ಪಾಳು ಬಿಡುತ್ತಿದ್ದು, ಬೆಳೆಗಳನ್ನು ಬೆಳೆಯುವಲ್ಲಿ ಹಿಂದೆ ಬೀಳುತ್ತಿದ್ದೇವೆ. ರಾಜ್ಯದ ಹಲವೆಡೆ ಕೃಷಿ ಭೂಮಿಗಳು ಪಾಳುಬಿದ್ದಿವೆ. ಅದನ್ನು ಮತ್ತೆ ಪುನಶ್ಚೇತನ ಮಾಡಿ ಬೆಳೆ ತೆಗೆಯುವಂತಾಗಬೇಕು ಎಂದು ಅವರು ತಿಳಿಸಿದರು.
ಸಚಿವರು ಟ್ರಸ್ಟ್‌ನ ಅಧ್ಯಕ್ಷ ಹಾಗೂ ಶಾಸಕ ಕೆ.ರಘುಪತಿ ಭಟ್, ಸಣ್ಣ ನೀರಾವರಿ ಇಲಾಖಾ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ, ಉದ್ಯಮಿ ಕೆ.ಬಿ. ಸೀತಾರಾಮ ಪ್ರಭು ಗದ್ದೆಗೆ ಹಾಲನ್ನು ಅರ್ಪಿಸಿ ಸ್ಥಳೀಯರೊಂದಿಗೆ ಸೇರಿ ಗದ್ದೆಗೆ ಇಳಿದು ನೇಜಿ ನೆಟ್ಟರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಸುಮಿತ್ರಾ ಆರ್.ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ, ನಗರಸಭಾ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಗಿರಿಧರ್ ಕರಂಬಳ್ಳಿ, ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರ್, ಕೋಶಾಧಿಕಾರಿ ರಾಘವೇಂದ್ರ ಕಿಣಿ, ಬ್ರಹ್ಮಾವರ ವಲಯ ಕೃಷಿ ಮತ್ತು ತೋಟ ಗಾರಿಕೆ ಸಂಶೋಧನಾ ಕೇಂದ್ರದ ಹಿರಿಯ ಕ್ಷೇತ್ರ ಅಧಿಕಾರಿ ಶಂಕರ್, ಉಡುಪಿ ತಾಪಂ ಕಾರ್ಯನಿರ್ವಹಣಾಧಿಕಾರಿ ಮೋಹನ್‌ರಾಜ್ ಮೊದಲಾದವರು ಉಪಸ್ಥಿತರಿ ದ್ದರು. ಬಳಿಕ ಸಚಿವರು ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದ ಕೆಳಗದ್ದೆ ಯಲ್ಲಿ ಹಡಿಲು ಭೂಮಿ ಕೃಷಿ ನಾಟಿ ಕಾರ್ಯಕ್ಕೆ ಚಾಲನೆ ನೀಡಿದರು
ಸಚಿವರಿಂದ ಕಿಂಡಿ ಅಣೆಕಟ್ಟು ಪರಿಶೀಲನೆ
ಉಡುಪಿ ವಿಧಾನಸಭಾ ಕ್ಷೇತ್ರದ ಉಪ್ಪೂರು ಗ್ರಾಪಂ ವ್ಯಾಪ್ತಿಯ ಹೇರಾಯಿ ಬೆಟ್ಟು ಎಂಬಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಲಾಗುತ್ತಿರುವ 35 ಕೋಟಿ ರೂ. ವೆಚ್ಚದ ಕಿಂಡಿ ಅಣೆಕಟ್ಟು ಕಾಮಗಾರಿಯ ಸ್ಥಿತಿಗತಿಯನ್ನು ಸಚಿವ ಜೆ.ಸಿ.ಮಾಧುಸ್ವಾಮಿ ಇಂದು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಶಾಸಕ ಕೆ.ರಘುಪತಿ ಭಟ್, ಗ್ರಾಮಾಂತರ ಬಿಜೆಪಿ ಉಪಾಧ್ಯಕ್ಷ ರಘುರಾಮ್ ಶೆಟ್ಟಿ, ಬ್ರಹ್ಮಾವರ ತಾಪಂ ಮಾಜಿ ಸದಸ್ಯೆ ವಸಂತಿ ಬೈಕಾಡಿ, ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮೀ, ಕಾರ್ಯಪಾಲಕ ಅಭಿಯಂತ ರರಾದ ಗೋಕುಲ್ದಾಸ್, ಸಹಾಯಕ ಕಾರ್ಯ ಪಾಲಕ ಅಭಿಯಂತರ ಶೇಷ ಕೃಷ್ಣ, ಗುತ್ತಿಗೆದಾರರಾದ ರಾಜೇಶ್ ಕಾರಂತ್ ಮೊದ ಲಾದವರು ಉಪಸ್ಥಿತರಿದ್ದರು.







