ಜು.7ರಿಂದ ಮಳೆ ಬಿರುಸು ಪಡೆಯುವ ಸಾಧ್ಯತೆ: ಹವಾಮಾನ ಇಲಾಖೆ
ಮಂಗಳೂರು, ಜು.4: ಸದ್ಯ ದುರ್ಬಲವಾಗಿರುವ ಮುಂಗಾರು ಇನ್ನು ಎರಡ್ಮೂರು ದಿನಗಳಲ್ಲಿ ಮತ್ತೆ ಬಿರುಸು ಪಡೆಯುವ ಸಾಧ್ಯತೆ ಯಿದೆ. ಅದರಂತೆ ಹವಾಮಾನ ಇಲಾಖೆಯು ಕರಾವಳಿಯಲ್ಲಿ ಜು. 7ರಿಂದ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಹಾಗಾಗಿ ಬುಧವಾರದಿಂದ ಮತ್ತೆ ಮಳೆ ಬಿರುಸು ಪಡೆಯಲಿದೆ.
ರವಿವಾರ ಜಿಲ್ಲೆಯಲ್ಲಿ ಮೋಡ ಕವಿದ ಮತ್ತು ಬಿಸಿಲ ವಾತಾವರಣವಿತ್ತು. ಮುಂಜಾನೆಯ ವೇಳೆ ಕೆಲವು ಕಡೆ ಮಳೆಯಾಗಿದೆ. ಸಂಜೆ ಘಟ್ಟದ ತಪ್ಪಲಿನ ಸಾಧಾರಣ ಮಳೆ ಸುರಿದಿದೆ.
ರವಿವಾರ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.
Next Story





