ಜು. 5: ಕಾಲೇಜುಗಳಲ್ಲಿ ಲಸಿಕಾ ಶಿಬಿರ
ಮಂಗಳೂರು, ಜು.4: ದ.ಕ. ಜಿಲ್ಲೆಯಲ್ಲಿ ಜು.5ರಂದು ಕಾಲೇಜಿನಲ್ಲಿ ನೋಂದಾಯಿಸಿರುವ ಪದವಿ ವಿದ್ಯಾರ್ಥಿಗಳು/ಬೋಧಕ ಮತ್ತು ಬೊಧಕೇತರ ಸಿಬ್ಬಂದಿಗಳಿಗೆ ಕೋವಿಡ್ ಪ್ರತಿರೋಧ ಲಸಿಕಾ ಶಿಬಿರ ನಡೆಯಲಿದೆ. ಫಲಾನುಭವಿಗಳು ಕಾಲೇಜಿನ ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್ ಅಥವಾ ಸರಕಾರ ನಿಗದಿಪಡಿಸಿದ ಇತರ ಗುರುತಿನ ಚೀಟಿಯೊಂದಿಗೆ ಹಾಜರಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಪ್ರಕಟನೆ ತಿಳಿಸಿದೆ.
ಮಂಗಳೂರು ತಾಲೂಕಿನ ಹೀರಾ ಕಾಲೇಜು ಬಬ್ಬುಗುಡ್ಡೆ, ವಿಜಯ ಕಾಲೇಜು ಮುಲ್ಕಿ, ಭಾರತಿ ಕಾಲೇಜು ನಂತೂರು, ನಾರಾಯಣಗುರು ಕಾಲೇಜು ಕುದ್ರೋಳಿ, ಶ್ರೀನಿವಾಸ್ ಕಾಲೇಜು ಪಾಂಡೇಶ್ವರ, ಯೆನೆಪೊಯ ಅಲೈಡ್ ಸೈನ್ಸ್ ಮಂಗಳೂರು, ಕರಾವಳಿ ಕಾಲೇಜು ಕೊಟ್ಟಾರ, ಮಂಗಳೂರು ವಿವಿ ಕಾಲೇಜು ಹಂಪನಕಟ್ಟೆ, ಕೊಲಸೋ ಕಾಲೇಜು ಆಫ್ ನರ್ಸಿಂಗ್, ದಯಾನಂದ ಪೈ ಕಾಲೇಜು ಕಾರ್ಸ್ಟ್ರೀಟ್.
ಪುತ್ತೂರು, ಬೆಳ್ತಂಗಡಿ, ಸುಳ್ಯ ತಾಲೂಕಿನ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಬಂಟ್ವಾಳ ತಾಲೂಕಿನ ಬಂಟ್ವಾಳ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಪಡೆದು 84 ದಿನ ಪೂರೈಸಿದ ಅರ್ಹ ಫಲಾನುಭವಿಗಳಿಗೆ 2ನೇ ಡೋಸ್ ಲಸಿಕೆಯನ್ನು ನೀಡಲಾಗುವುದು.
ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಕೋವ್ಯಾಕ್ಸಿನ್ ಒಂದನೇ ಮತ್ತು ಎರಡನೇ ಡೋಸ್ ಲಸಿಕೆಯನ್ನು ನೀಡಲಾಗುವುದು. ಕೋವಿಶೀಲ್ಡ್ ಲಸಿಕೆಯ 1ನೇ ಡೋಸ್ ಪಡೆದು 84 ದಿನ ಪೂರೈಸಿದ ಅರ್ಹ ಫಲಾನುಭವಿಗಳಿಗೆ 2ನೇ ಡೋಸ್ ಲಸಿಕೆಯನ್ನು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ನೀಡಲಾಗುವುದು ಎಂದು ತಿಳಿಸಿದೆ.