ಕಾರ್ಕಳ: ಅಂತಾರಾಷ್ಟ್ರೀಯ ಮಾದಕ ವಸ್ತು ಮತ್ತು ಅಕ್ರಮ ಕಳ್ಳಸಾಗಣಿಕೆ ವಿರೋಧಿ ದಿನಾಚರಣೆ

ಕಾರ್ಕಳ: ರೋಟರಿ ಸಂಸ್ಥೆ, ಕಾರ್ಕಳ ನಗರ, ಗ್ರಾಮಾಂತರ ಪೊಲೀಸ್ ಠಾಣೆ ಜಂಟಿ ಆಶ್ರಯದಲ್ಲಿ "ಅಂತಾರಾಷ್ಟ್ರೀಯ ಮಾದಕ ವಸ್ತು ಮತ್ತು ಅಕ್ರಮ ಕಳ್ಳಸಾಗಣಿಕೆ ವಿರೋಧಿ ದಿನಾಚರಣೆ "ಕಾರ್ಯಕ್ರಮವನ್ನು ನಗರ ಪೋಲಿಸ್ ಠಾಣೆಯಲ್ಲಿ ನಡೆಸಲಾಯಿತು.
ಮುಖ್ಯ ಅತಿಥಿಯಾಗಿ ಕಾರ್ಕಳದ ಡಿವೈಎಸ್ಪಿ .ಎಸ್ ವಿಜಯ್ ಪ್ರಸಾದ್ ಅವರು ಮಾತನಾಡುತ್ತಾ "ಮಾದಕ ವಸ್ತುಗಳ ವಿರೋಧಿ ಜಾಗೃತಿಯು ನಮ್ಮ ಮನೆ ಹಾಗೂ ನಮ್ಮ ಪರಿಸರದಿಂದಲೇ ಆಗಬೇಕು ಜನರಲ್ಲಿ ಯಾವಾಗ ಜಾಗೃತಿ ಮೂಡುತ್ತದೆ ಆವಾಗ ಸಮಾಜ ಸುಧಾರಣೆಯಾಗುತ್ತದೆ" ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾದಕ ದ್ರವ್ಯ ವಿರೋಧಿ ಕರಪತ್ರವನ್ನು ಬಿಡುಗಡೆ ಮಾಡಲಾಯಿತು. ಸಾರ್ವಜನಿಕರಿಗೆ ಮಾಹಿತಿ ನೀಡು ವಂತಹ ಕಾರ್ಯಕ್ರಮಕ್ಕೆ ಡಿವೈಎಸ್ ಪಿ ಎಸ್ ವಿಜಯ ಪ್ರಸಾದ್ ಚಾಲನೆ ನೀಡಿದರು.
ಸರ್ಕಲ್ ಇನ್ಸ್ ಪೆಕ್ಟರ್ ಸಂಪತ್ ಕುಮಾರ್, ನಗರ ಠಾಣಾಧಿಕಾರಿ ಎಸ್ ಐ ಮಧು , ಗ್ರಾಮಾಂತರ ಠಾಣಾಧಿಕಾರಿ ಎಸ್ ಐ ತೇಜಸ್ವಿ , ಕಾರ್ಕಳ ಗ್ರಾಮಾಂತರ ಠಾಣೆಯ ಅಪರಾಧ ವಿಭಾಗದ ಎಸ್ ಐ . ಜನಾರ್ದನ್ ಹಾಗೂ ಎಲ್ಲಾ ಪೋಲಿಸ್ ಸಿಬ್ಬಂದಿಗಳು , ಸಾರ್ವಜನಿಕರು ಹಾಗೂ ರೋಟರಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು .
ರೋಟರಿ ಅಧ್ಯಕ್ಷರಾದ ರೊ. ಸುರೇಶ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ರೊ. ಗಂಗಾಧರ್ ಕಾರ್ಯ ಕ್ರಮವನ್ನು ನಿರೂಪಿಸಿದರು. ರೋಟರಿ ಕಾರ್ಯದರ್ಶಿ ರೊ. ಇಕ್ಬಾಲ್ ಅಹಮದ್ ವಂದಿಸಿದರು.







