ದುಬೈ: 'ಕೆಎಸ್ ಸಿಸಿ' ವತಿಯಿಂದ ರಕ್ತದಾನ ಅಭಿಯಾನ

ದುಬೈ: ದುಬೈ ಸರಕಾರದ ಕಮ್ಯುನಿಟಿ ಡೆವಲಪ್ ಮೆಂಟ್ ಅಥಾರಿಟಿ (ಸಿಡಿಎ) ಬೆಂಬಲದೊಂದಿಗೆ, ದುಬೈ ಹೆಲ್ತ್ ಅಥಾರಿಟಿ (ಡಿಎಚ್ ಎ)ಸಹಯೋಗದಲ್ಲಿ ದುಬೈನ ಲತಿಫಾ ಆಸ್ಪತ್ರೆಯಲ್ಲಿ ವಿಶ್ವ ರಕ್ತ ದಾನಿಗಳ ದಿನ-2021ರ ಆಚರಣೆಯ ಅಂಗವಾಗಿ ಕರ್ನಾಟಕ ಸ್ಪೋಟ್ಸ್ ಹಾಗೂ ಕಲ್ಚರಲ್ ಕ್ಲಬ್ (ಕೆಎಸ್ ಸಿಸಿ) ರಕ್ತ ದಾನ ಅಭಿಯಾನವನ್ನು ಶುಕ್ರವಾರ ಆಯೋಜಿಸಿತ್ತು.
ರಕ್ತ ದಾನ ಅಭಿಯಾನವು ಮಧ್ಯಾಹ್ನ 3ರಿಂದ ರಾತ್ರಿ 8ರ ತನಕ ನಡೆದಿದೆ. ಶಿಬಿರದಲ್ಲಿ ಸುಮಾರು 171 ಮಂದಿ ಭಾಗಿಯಾಗಿ ದ್ದಾರೆ. ದುಬೈ ಬ್ಲಡ್ ಬ್ಯಾಂಕಿಗೆ ಬೆಂಬಲ ನೀಡಲು ರಕ್ತ ದಾನ ಮಾಡಿದ್ದಾರೆ. ಕೊರೋನ ಸಾಂಕ್ರಾಮಿಕ ರೋಗದ ಪರಿಸ್ಥಿತಿಯಲ್ಲಿ ರಕ್ತದಾನವನ್ನು ಮುಂದುವರಿಸಲು ಹಾಗೂ ದುಬೈ ಹೆಲ್ತ್ ಅಥಾರಿಟಿ ಹಾಗೂ ದುಬೈ ಸರಕಾರಕ್ಕೆ ಬೆಂಬಲ ನೀಡುವುದನ್ನು ಖಚಿತ ಪಡಿಸಿಕೊಳ್ಳಲು ಕೆಎಸ್ ಸಿಸಿ ಉಪಕ್ರಮವನ್ನು ಕೈಗೊಂಡಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಕರ್ನಾಟಕ ಸ್ಪೋಟ್ಸ್ ಹಾಗೂ ಕಲ್ಚರಲ್ ಕ್ಲಬ್(ಕೆಎಸ್ ಸಿಸಿ) ಎಲ್ಲ ರಕ್ತ ದಾನಿಗಳನ್ನು ಪ್ರಶಂಶಿಸಿದ್ದು, ದುಬೈ ಹೆಲ್ತ್ ಅಥಾರಿಟಿ (ಡಿಎಚ್ ಎ) ಹಾಗೂ ಪ್ರಾಯೋಜಕರಿಗೆ ಕೃತಜ್ಞತೆ ಸಲ್ಲಿಸಿದೆ. ಸ್ವಯಂಸೇವಕರು ಹಾಗೂ ಬೆಂಬಲಿಗರಿಗೆ ವಿಶೇಷ ಧನ್ಯವಾದ ತಿಳಿಸಿದೆ. ಕಾರ್ಯಕ್ರಮದಲ್ಲಿ ಕೆಎಸ್ ಸಿಸಿ ಕ್ಲಬ್ ಮುಹಮ್ಮದ್ ಶಫಿ ಉಪಸ್ಥಿತರಿದ್ದರು.












