ಬೆಂಗಳೂರು: ಮೀನಿನ ಬಾಕ್ಸ್‌ನಲ್ಲಿ ಗಾಂಜಾ ಸಾಗಣೆ; ಮೂವರ ಬಂಧನ

ಬೆಂಗಳೂರು, ಜು.4: ಮೀನಿನ ಬಾಕ್ಸ್ ಒಳಗಡೆ ಗಾಂಜಾ ಸಾಗಿಸಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಒರಿಸ್ಸಾ ಮೂಲದ ದಿವಾಕರ್, ಬೆಂಗಳೂರಿನ ಸುದರ್ಶನ್, ವಿಶ್ವನಾಥ್ ಎಂದು ಗುರುತಿಸಲಾಗಿದೆ. ಈ ಆರೋಪಿಗಳಿಂದ 3 ಲಕ್ಷ ರೂ. ಮೌಲ್ಯದ 11 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಿಗೆ ದಿವಾಕರ್ ಒರಿಸ್ಸಾದಿಂದ ಗಾಂಜಾ ಸರಬರಾಜು ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಒರಿಸ್ಸಾದಲ್ಲಿ ಬೆಳೆಯುವ ಗಾಂಜಾವನ್ನು ಟ್ರೈನ್ ಮೂಲಕ ಬೆಂಗಳೂರಿಗೆ ತರಲಾಗುತ್ತಿತ್ತು. ಪ್ರತಿಷ್ಠಿತ ಕಾಲೇಜು, ಕಾರ್ಖಾನೆ ಹಾಗೂ ಡಾಬಗಳ ಬಳಿ ಬಂಧಿತರು ಗಿರಾಕಿಗಳಿಗೆ ಗಾಂಜಾವನ್ನು ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿಯ ಮೇರೆಗೆ ಮಾದನಾಯಕನಹಳ್ಳಿ ಠಾಣೆಯ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
Next Story





