ಯುವಕ ನಾಪತ್ತೆ
ಮಂಗಳೂರು, ಜು.5: ನಗರದ ಬಂದರ್ ಅನ್ಸಾರಿ ರಸ್ತೆಯ ವಿಎಪಿಎಂ ಬಿಲ್ಡಿಂಗ್ನ ಒಂದನೆ ಕಟ್ಟಡದಲ್ಲಿ ವಾಸವಾಗಿರುವ ಹಬೀಬುರ್ರಹ್ಮಾನ್ (24) ಎಂಬಾತ ಜು.2ರ ಸಂಜೆ 5 ಗಂಟೆಯಿಂದ ನಾಪತ್ತೆಯಾದ ಬಗ್ಗೆ ಬಂದರ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೂಲಿ ಕೆಲಸ ಮಾಡಿಕೊಂಡಿದ್ದ ಈತ ಅಸ್ಸಾಮಿ ಮತ್ತು ಹಿಂದಿ ಭಾಷೆ ಮಾತನಾಡುತ್ತಾನೆ. 5 ಅಡಿ ಎತ್ತರವಿದ್ದಾನೆ ಎಂದು ಬಂದರ್ ಠಾಣೆಗೆ ದೂರು ನೀಡಲಾಗಿದೆ.
Next Story