ಲಾರಿ ಚಾಲಕನ ಕೊಲೆಯತ್ನ ಆರೋಪ: ದೂರು
ಮಂಗಳೂರು, ಜು.5: ಕಂಕನಾಡಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಲಾರಿ ಚಾಲಕನ ಮೇಲೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ್ದಾರೆ ಎನ್ನಲಾದ ಘಟನೆ ನಡೆದಿದ್ದು, ಈ ಬಗ್ಗೆ ದೂರು ದಾಖಲಾಗಿದೆ.
ಜು.4ರಂದು ಲಾರಿ ಚಾಲಕ ಸೆಂಥಿಮಲ್ ಮಗೇಂದ್ರನ್ ಎಂಬವರು ಪಡೀಲ್‌ನಲ್ಲಿರುವ ಟ್ರಾನ್ಸ್‌ಪೋರ್ಟ್ ಕಚೇರಿಯ ಪಾರ್ಕಿಂಗ್‌ನಲ್ಲಿ ತಾನು ಚಾಲನೆ ಮಾಡುವ ಲಾರಿಯಲ್ಲಿ ಕುಳಿತು ಬಾಡಿಗೆಗಾಗಿ ಕಾಯುತ್ತಿದ್ದು, ಈ ವೇಳೆ ಇನ್ನೊಂದು ಲಾರಿಯ ಚಾಲಕ ಆಯ್ಯಪ್ಪನ್ ಲಾರಿಯ ಕ್ಯಾಬಿನ್ ಒಳಗೆ ಬಂದಿದ್ದು, ಸಂಬಂಧಿಯೊಬ್ಬರ ದ್ವಿಚಕ್ರ ವಾಹನದ ಲೋನ್ ಪಾವತಿಸದ ವಿಚಾರ ವಾಗಿ ಮಾತಿಗೆ ಮಾತು ಬೆಳೆದಿದೆ. ಈ ಸಂದರ್ಭ ಆಯ್ಯಪ್ಪನ್ ಲಾರಿಯ ಕ್ಯಾಬಿನ್‌ನಲ್ಲಿದ್ದ ಚಾಕುವನ್ನು ತೆಗೆದು ಸೆಂಥಿಮಲ್ ಮಗೇಂದ್ರನ್‌ನ ಹೊಟ್ಟೆಗೆ ಚುಚ್ಚಿ, ಕೊಲೆಗೆ ಯತ್ನಿಸಿದ್ದಾನೆ ಎಂದು ದೂರಲಾಗಿದೆ.
ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story





