ಮನೆಗೆ ನುಗ್ಗಿ ಕಳವು : ಇಬ್ಬರ ಬಂಧನ
ಬೆಂಗಳೂರು, ಜು.5: ಮನೆಯ ಬೀಗ ಮುರಿದು ಒಳನುಗ್ಗಿ ಚಿನ್ನಾಭರಣ ಕಳವು ಮಾಡಿದ್ದ ಆರೋಪ ಪ್ರಕರಣ ಸಂಬಂಧ ಇಬ್ಬರನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರು ಮೇ 4ರಂದು ಹಾಡುಹಗಲೇ ಮನವರ್ತಿ ಪೇಟೆಯ ಎಸ್‍ಡಿಎಂ ಲೇನ್‍ನ ಮನೆಯ ಬೀಗ ಮತ್ತು ಬಾಗಿಲು ಒಡೆದು ನುಗ್ಗಿ ಚಿನ್ನದ ಒಡವೆಗಳು, ಬೆಳ್ಳಿಯ ವಸ್ತುಗಳು ಹಾಗೂ ನಗದು ಹಣವನ್ನು ಕಳವು ಮಾಡಿ ಪರಾರಿಯಾಗಿದ್ದರು.
ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡ ಕಾಟನ್‍ಪೇಟೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣ ಭೇದಿಸಿ, 1ಲಕ್ಷ 35 ಸಾವಿರ ಮೌಲ್ಯದ 12ಗ್ರಾಂ ಚಿನ್ನ 1, ಕೆಜಿ 250 ಗ್ರಾಂ ತೂಕದ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಡಾ. ಸಂಜೀವ್ ಪಾಟೀಲ್ ಹೇಳಿದರು.
Next Story





