ಬೆಂಗಳೂರು: ಮಾದಕ ವಸ್ತು ಮಾರಾಟ; ಮಹಿಳೆ ಸೇರಿ ಇಬ್ಬರು ವಿದೇಶಿ ಪ್ರಜೆಗಳ ಬಂಧನ

ಬೆಂಗಳೂರು, ಜು.5: ಮಾದಕ ವಸ್ತು ಮಾರಾಟ ಸಂಬಂಧ ಮಹಿಳೆ ಸೇರಿ ಇಬ್ಬರು ವಿದೇಶಿ ಪ್ರಜೆಗಳನ್ನು ಬಂಧಿಸಿರುವ ಗೋವಿಂದಪುರ ಠಾಣಾ ಪೊಲೀಸರು, 4 ಲಕ್ಷ 70 ಸಾವಿರ ಮೌಲ್ಯದ 55 ಗ್ರಾಂ ಕೊಕೇನ್ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಡ್ರಗ್ಸ್ ಮಾರಾಟ ಮಾಡುವ ಪೆಡ್ಲರ್‍ಗಳನ್ನು ಪತ್ತೆ ಮಾಡಲು ಹಿರಿಯ ಪೆÇಲೀಸ್ ಅಧಿಕಾರಿಗಳು ನೀಡಿದ ಸೂಚನೆಯಂತೆ ಇಲ್ಲಿನ ಎಚ್‍ಬಿಆರ್ ಲೇಔಟ್ ಹಿಲಾಲ್ ನಗರದಲ್ಲಿ ಕಾರ್ಯಾಚರಣೆ ಕೈಗೊಂಡ ಗೋವಿಂದಪುರ ಪೆÇಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಡಿಸಿಪಿ ಡಾ.ಶರಣಪ್ಪ ತಿಳಿಸಿದ್ದಾರೆ.
ಬಂಧಿತರಿಂದ ಸುಮಾರು 4 ಲಕ್ಷ 70 ಸಾವಿರ ಮೌಲ್ಯದ 55 ಗ್ರಾಂ ಕೊಕೇನ್ ಮಾದಕ ವಸ್ತು, ಮೊಬೈಲ್, ಸ್ಕೂಟರ್ ಜಪ್ತಿ ಮಾಡಿ ತನಿಖೆ ಮುಂದುವರೆಸಲಾಗಿದೆ ಎಂದು ಅವರು ಹೇಳಿದರು.
Next Story





