ಕೆನಡ: ಉಯಿಘರ್ ಮುಸ್ಲಿಮರಿಂದ ಚೀನಾ ವಿರುದ್ಧ 15 ದಿನಗಳ ಪ್ರತಿಭಟನಾ ಮೆರವಣಿಗೆ

photo: twitter@TheWeeklyBull
(ಕೆನಡ), ಜು. 5: ಚೀನಾವು ಉಯಿಘರ್ ಮುಸ್ಲಿಮರ ಮಾನವಹಕ್ಕುಗಳನ್ನು ಉಲ್ಲಂಘಿಸುತ್ತಿರುವುದನ್ನು ಪ್ರತಿಭಟಿಸಿ ಕೆನಡದ ಈಸ್ಟ್ ಟರ್ಕಿಸ್ತಾನ್ ಅಸೋಸಿಯೇಶನ್ 15 ದಿನಗಳ ಪ್ರತಿಭಟನಾ ಮೆರವಣಿಗೆಯನ್ನು ಆರಂಭಿಸಿದೆ. ಗೊರಾಂಟೊದಿಂದ ಒಟ್ಟಾವಕ್ಕೆ ತೆರಳುವ ಈ ಪ್ರತಿಭಟನಾ ಮೆರವಣಿಗೆಗೆ ಫ್ರೀಡಮ್ ಮಾರ್ಚ್ಎಂದು ಹೆಸರಿಡಲಾಗಿದ್ದು, ಅಮೆರಿಕದ ಸ್ವಾತಂತ್ರ್ಯ ದಿನವಾದ ಜುಲೈ 4ರಂದು ಚಾಲನೆ ನೀಡಲಾಗಿದೆ.
ಪೂರ್ವ ಟರ್ಕಿಸ್ತಾನ (ಚೀನಾದ ಕ್ಸಿನ್ಜಿಯಾಂಗ್)ದಲ್ಲಿ ನಡೆಯುತ್ತಿರುವ ಉಯಿಘರ್ ಮುಸ್ಲಿಮರ ನರಮೇಧದ ಬಗ್ಗೆ ಜಾಗೃತಿ ಹುಟ್ಟಿಸುವುದಕ್ಕಾಗಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕೆರು ಹೇಳಿದ್ದಾರೆ .ಚೀನಾ ಸರಕಾರವು ಜುಲೈ 5ರಂದು ನಡೆಸಿದ ಉರುಮ್ಕಿ ಹತ್ಯಾಕಾಂಡದ ಬಲಿಪಶುಗಳಿಗೆ ಗೌರವ ಸಲ್ಲಿಸುವ ಉದ್ದೇಶವನ್ನೂ ಇದು ಹೊಂದಿದೆ ಎಂದು ಅವರು ಹೇಳಿದ್ದರೆ.ಕ್ಸಿನ್ ಜಿಯಾಂಗ್ ನ ಉರುಮ್ಕಿಯಲ್ಲಿ 2009 ಜುಲೈ 5ರಂದು ಚೀನಾ ಸರಕಾರ ನಡೆಸಿದ ದಾಳಿಯಲ್ಲಿ ಸಾವಿರಾರು ಉಯಿಘರ್ ಪ್ರತಿಭಟನಕಾರರು ಹತರಾಗಿದ್ದರು.
Next Story





