ಕರ್ನಾಟಕ, ತಮಿಳುನಾಡು- ಕೇರಳ ನಡುವೆ ವಿಶೇಷ ರೈಲು ಸಂಚಾರ ಆರಂಭ

ಸಾಂದರ್ಭಿಕ ಚಿತ್ರ
ಬೆಂಗಳೂರು, ಜು.5: ತಮಿಳುನಾಡು, ಕರ್ನಾಟಕ ಮತ್ತು ಕೇರಳ ನಡುವೆ 3 ಜೋಡಿ ರೈಲುಗಳ ಸಂಚಾರ ವಿಸ್ತರಿಸಲು ನೈಋತ್ಯ ರೈಲ್ವೆ ನಿರ್ಧರಿಸಿದ್ದು, ಜು.5ರಿಂದ ರೈಲು ಸೇವೆ ಆರಂಭವಾಗಿದೆ.
ಕೊರೋನ ವೈರಸ್ ಸೋಂಕಿನಿಂದಾಗಿ ಹಲವಾರು ರೈಲುಗಳ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿತ್ತು. ಆದರೆ, ಈಗ ಸೋಂಕು ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ತಮಿಳುನಾಡು, ಕರ್ನಾಟಕ ಮತ್ತು ಕೇರಳದಲ್ಲಿ 3 ಜೋಡಿ ರೈಲುಗಳ ಸಂಚಾರವನ್ನು ನೈಋತ್ಯ ರೈಲ್ವೆ ವಿಸ್ತರಿಸಿದೆ.
ಚೆನ್ನೈ ಸೆಂಟ್ರಲ್ ಮೈಸೂರು ಎಕ್ಸ್ ಪ್ರೆಸ್ ವಿಶೇಷ ರೈಲು ಜು.5ರಿಂದ ಮುಂದಿನ ಆದೇಶದವರೆಗೆ ಸಂಚಾರ ಆರಂಭಿಸಲಿದೆ. ಮೈಸೂರು ಚೆನ್ನೈ ಸೆಂಟ್ರಲ್ ಎಕ್ಸ್ ಪ್ರೆಸ್ ವಿಶೇಷ ಆರಂಭವಾಗಲಿದ್ದು, ಅದೇ ರೀತಿ ಕೊಚುವೇಲಿ ಬಾಣಸವಾಡಿ ಎಕ್ಸ್ಪ್ರೆಸ್ ವಿಶೇಷ ರೈಲು ಕೂಡ ನಡೆಯಲಿದೆ.
ಜು.8 ರಿಂದ ಸಂಚಾರ: ಕೊಚುವೇಲಿ ಬಾಣಸವಾಡಿ ಎಕ್ಸ್ಪ್ರೆಸ್ ರೈಲು ಜು.8ರಿಂದ ಚಲಿಸಲಿದೆ. ಅದೇ ರೀತಿ ಬಾಣಸವಾಡಿ ಕೊಚುವೇಲಿ ಎಕ್ಸ್ ಪ್ರೆಸ್ ವಿಶೇಷ ರೈಲು ಜು.9 ರಿಂದ ಸಂಚಾರ ನಡೆಸಲಿದೆ ಎಂದು ನೈಋತ್ಯ ರೈಲು ತಿಳಿಸಿದೆ. ಎರ್ನಾಕುಲಂ ಬಾಣಸವಾಡಿ ಎಕ್ಸ್ ಪ್ರೆಸ್ ವಿಶೇಷ ರೈಲು ಜು.5ರಿಂದ ಆರಂಭಿಸಲಾಗಿದ್ದು, ಪ್ರಯಾಣಿಕರಿಗೆ ಅನುಕೂಲವಾಗಲಿದೆ.





