ಕಾಸರಗೋಡು : ಕೆಎಸ್ಸಾರ್ಟಿಸಿ ಬಸ್-ಕಾರು ನಡುವೆ ಅಪಘಾತ; ಓರ್ವ ಮೃತ್ಯು
ಇಬ್ಬರಿಗೆ ಗಂಭೀರ ಗಾಯ

ಕಾಸರಗೋಡು : ಕೆಎಸ್ಸಾರ್ಟಿಸಿ ಬಸ್ ಮತ್ತು ಕಾರು ನಡುವೆ ಉಂಟಾದ ಅಪಘಾತದಲ್ಲಿ ಕುಂಬಳೆ ನಿವಾಸಿಯೋರ್ವರು ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಸೋಮವಾರ ರಾತ್ರಿ ಕಾಞಂಗಾಡ್ ನಲ್ಲಿ ನಡೆದಿದೆ.
ಮೃತರನ್ನು ಕುಂಬಳೆ ಆರಿಕ್ಕಾಡಿಯ ಅಲಿ (32) ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡ ಇಬ್ಬರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ನೀಲೇಶ್ವರದಿಂದ ಕಾಞಂಗಾಡ್ ಗೆ ಹೋಗುತ್ತಿದ್ದ ಬಸ್ ಮತ್ತು ಕುಂಬಳೆಯಿಂದ ಕಣ್ಣೂರಿಗೆ ಹೋಗುತ್ತಿದ್ದ ಕಾರು ನಡುವೆ ಅಪಘಾತ ಸಂಭವಿಸಿದೆ ಸ್ಥಳೀಯರು ತಿಳಿಸಿದ್ದಾರೆ.
ಹೊಸದುರ್ಗ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.












