ಶೃಂಗೇರಿಯಲ್ಲಿ ದಂಪತಿ ಮೇಲೆ ಕರಡಿ ದಾಳಿ: ಇಬ್ಬರಿಗೂ ಗಂಭೀರ ಗಾಯ
ಚಿಕ್ಕಮಗಳೂರು, ಜು.5: ತಾಲೂಕಿನ ತಾರೊಳ್ಳಿಕೊಡಿಗೆಯಲ್ಲಿ ಮನೆಯ ಹತ್ತಿರ ಕೆಲಸ ಮಾಡುತ್ತಿದ್ದ ದಂಪತಿ ಮೇಲೆ ಕರಡಿಯೊಂದು ದಾಳಿ ನಡೆಸಿದ್ದು, ಇಬ್ಬರೂ ಗಂಭೀರ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದು, ಗಾಯಾಳುಗಳನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಂದ್ರಶೇಖರ್(50) ಹಾಗೂ ಅವರ ಪತ್ನಿ ಜಯಲಕ್ಷ್ಮೀ(39) ಕರಡಿ ದಾಳಿಗೊಳಗಾದವರು ಎಂದು ತಿಳಿದುಬಂದಿದ್ದು, ಮನೆಯ ಹತ್ತಿರ ಸೊಪ್ಪು ಕಡಿಯುವಾಗ ಏಕಾಏಕಿ ಕರಡಿ ದಾಳಿ ನಡೆಸಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಶೃಂಗೇರಿ ವಲಯ ಅರಣ್ಯಾಧಿಕಾರಿ ಸಂಪತ್ ಕುಮಾರ್, ಇತ್ತೀಚಿನ ಕೆಲವು ವರ್ಷಗಳಲ್ಲಿ ಶೃಂಗೇರಿಯಲ್ಲಿ ಕರಡಿ ದಾಳಿ ಪ್ರಕರಣ ಇದೇ ಮೊದಲಾಗಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ ಕರಡಿಯು ತನ್ನ ಮರಿಯೊಂದಿಗೆ ಇದ್ದುದರಿಂದ ದಾಳಿ ಮಾಡಿರುವ ಸಾಧ್ಯತೆಯಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು
Next Story





