ಟೀಮ್ ಬಿ-ಹ್ಯೂಮನ್‌ನಿಂದ ವೆನ್ಲಾಕ್ ಆಸ್ಪತ್ರೆಯ ರೋಗಿಗಳಿಗೆ ಸ್ಟೀಲ್ ಸ್ಟಾಂಡ್, ವಾಕರ್ ವಿತರಣೆ

ಮಂಗಳೂರು, ಜು.5: ಟೀಮ್ ಬಿ-ಹ್ಯೂಮನ್ ವತಿಯಿಂದ ನಗರದ ವೆನ್ಲಾಕ್ ಆಸ್ಪತ್ರೆಯ ರೋಗಿಗಳಿಗೆ ನಡೆದಾಡಲು ಪೂರಕವಾದ ಸ್ಟೀಲ್ ಸ್ಟಾಂಡ್ ವಾಕರ್, ವಾಕಿಂಗ್ ಸ್ಟಿಕ್, ವೀಲ್ ಚೇರ್, ಬಿಸ್ಕೆಟ್ ಪ್ಯಾಕೆಟ್ ಸಹಿತ ವಿವಿಧ ವೈದ್ಯಕೀಯ ಅಗತ್ಯ ವಸ್ತುಗಳನ್ನು ಸೋಮವಾರ ಸಂಜೆ ವಿತರಿಸಲಾಯಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆಲ್ ಕಾಲೇಜ್ ಸ್ಟುಡೆಂಟ್ಸ್ ಯೂನಿಯನ್ (ಎಸಿಎಸ್‌ಯು) ಉಪಾಧ್ಯಕ್ಷ ಅಹ್ನಾಫ್ ಡೀಲ್ಸ್, ವೆನ್ಲಾಕ್ ಆಸ್ಪತ್ರೆಯಲ್ಲಿ ಅಗತ್ಯವಿದ್ದ ರೋಗಿಗಳಿಗೆ ಸ್ಟೀಲ್ ಸ್ಟಾಂಡ್ ವಾಕರ್, ವಾಕಿಂಗ್ ಸ್ಟಿಕ್, ಸುಮಾರು 500ಕ್ಕೂ ಹೆಚ್ಚು ಬಿಸ್ಕೆಟ್ ಪ್ಯಾಕೇಟ್‌ಗಳನ್ನು ವಿತರಿಸಲಾಗಿದೆ. ಮುಂದಿನ ದಿನಗಳಲ್ಲೂ ಇನ್ನೂ ಹೆಚ್ಚಿನ ಜನರಿಗೆ ಸಹಾಯಹಸ್ತ ನೀಡಲಾಗುವುದು ಎಂದು ಹೇಳಿದರು.
ರಾಜ್ಯ ಯುವ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ಮಾತನಾಡಿ, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಟೀಮ್ ಬಿ-ಹ್ಯೂಮನ್ ತಂಡದಿಂದ ರೋಗಿಗಳಿಗೆ ಅಗತ್ಯವಾದ ವಸ್ತುಗಳನ್ನು ವಿತರಿಸಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಸಹಾಯಕ ರೋಗಿಗಳ ಸಮಸ್ಯೆಯನ್ನು ಮನಗಂಡು ನಮ್ಮ ತಂಡವು ಸಹಾಯ ಮಾಡುತ್ತಿದೆ. ಈ ಸೇವೆಯು ಮುಂದಿನ ದಿನಗಳಲ್ಲೂ ಮುಂದುವರಿಯಲಿದೆ ಎಂದು ಹೇಳಿದರು.
ಟೀಮ್ ಬಿ-ಹ್ಯೂಮನ್ ಸಂಸ್ಥಾಪಕ ಆಸಿಫ್ ಡೀಲ್ಸ್, ಅಲ್ತಾಫ್ ಪಾಂಡೇಶ್ವರ, ಇಕ್ಬಾಲ್ ಬಂಟ್ವಾಳ, ಮುಫ್ತಿ ಅಡ್ಕ, ಬಶೀರ್, ಬಚ್ಚಿ ಡಿಎಕ್ಸ್, ಅಫ್ರೀದ್ ಎ.ಎಚ್., ಅರ್ಷದ್, ಸಾಹಿಲ್, ರಾಹಿಲ್, ಶಹಿಮ್ ಮತ್ತಿತರರು ಉಪಸ್ಥಿತರಿದ್ದರು.












