ಆರ್ಥಿಕ ಸಂಕಷ್ಟ, ಇಂಧನ ಬೆಲೆ ಹೆಚ್ಚಳ: ಬಿಎಂಟಿಸಿ ಪ್ರಯಾಣ ದುಬಾರಿ?

ಬೆಂಗಳೂರು, ಜು.5: ಲಾಕ್‍ಡೌನ್‍ನಿಂದ ಆರ್ಥಿಕ ಸಂಕಷ್ಟ ಹಾಗೂ ಇಂಧನ ಬೆಲೆ ತೀವ್ರವಾಗಿ ಅಧಿಕವಾಗುತ್ತಿರುವ ಕಾರಣದಿಂದಾಗಿ ಬೆಂಗಳೂರಿನ ಬಿಎಂಟಿಸಿ ಬಸ್ಸಿನ ಟಿಕೆಟ್ ದರವೂ ಏರಿಕೆ ಆಗಲಿದೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಬಸ್ ಟಿಕೆಟ್ ದರ ಹೆಚ್ಚಳ ಸಂಬಂಧ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಬಿಎಂಟಿಸಿ, ಶೇ.20ರಷ್ಟು ದರ ಹೆಚ್ಚಳ ಮಾಡುವಂತೆ ಉಲ್ಲೇಖಿಸಿದೆ. ಇನ್ನು, ಶೀಘ್ರದಲ್ಲಿಯೇ ರಾಜ್ಯ ಸರಕಾರಕ್ಕೆ ದರ ಏರಿಕೆ ಕುರಿತು ಮತ್ತೊಂದು ಪ್ರಸ್ತಾವನೆ ಸಲ್ಲಿಸಲು ಬಿಎಂಟಿಸಿ ಮುಂದಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ, ಲಾಕ್‍ಡೌನ್‍ನಿಂದ ಭಾರೀ ನಷ್ಟವುಂಟಾಗಿರುವ ಹಿನ್ನೆಲೆಯಲ್ಲಿ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಅನ್‍ಲಾಕ್ ಆದ ಬಳಿಕ ಎಲ್ಲ ಬಸ್‍ಗಳ ಕಾರ್ಯಾಚರಣೆಯಿಂದ ನಿರ್ವಹಣೆ ವೆಚ್ಚ ಇನ್ನಷ್ಟು ಹೆಚ್ಚಳವಾಗಲಿದೆ. ಹೀಗಾಗಿ, ದರ ಏರಿಕೆ ಅನಿವಾರ್ಯ ಎಂದರು.
Next Story





