ಮಂಡ್ಯ: ‘ಎಸ್ಸೆಸ್ಸೆಲ್ಸಿ ಮಿತ್ರ’ ಆ್ಯಪ್ ಬಿಡುಗಡೆ
ಮಂಡ್ಯ, ಜು.5: ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ(ಡಯಟ್) ವತಿಯಿಂದ ಕೋವಿಡ್-19 ಸಾಂಕ್ರಾಮಿಕ ನಿಯಂತ್ರಿಸುವ ಸಲುವಾಗಿ ಶಾಲೆಗಳಿಗೆ ವಿದ್ಯಾರ್ಥಿಗಳು ಭೌತಿಕವಾಗಿ ಹಾಜರಾಗಲು ಸಾಧ್ಯವಾಗದ ಕಾರಣ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಸ್ವಯಂ ಅಧ್ಯಯನ ಮಾಡಲು ಅನುಕೂಲವಾಗುವಂತೆ ‘ಎಸ್ಸೆಸ್ಸೆಲ್ಸಿ ಮಿತ್ರ" ಎಂಬ ಶೈಕ್ಷಣಿಕ ಮೊಬೈಲ್ ಆಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ.
ಸದರಿ ಆ್ಯಪ್ ನಲ್ಲಿ 6 ವಿಷಯಗಳ ಎಲ್ಲಾ ಘಟಕಗಳಿಗೂ ಲಭ್ಯವಿರುವ ವಿಡಿಯೋ ಪಾಠಗಳು, ಸಂವೇದ ತರಗತಿಗಳು, ಆನ್‍ಲೈನ್ ಕ್ವಿಜ್, ಪ್ರಶ್ನೆಕೋಶ, ಇತರೆ ಎಲ್ಲಾ ಇ- ಸಂಪನ್ಮೂಲಗಳನ್ನು ಒಂದೇ ಸೂರಿನಡಿ ಒದಗಿಸಲಾಗಿದೆ.
ಇದು ಪ್ರಸ್ತುತ ನಡೆಯುತ್ತಿರುವ ಎಸ್ಸೆಸ್ಸೆಲ್ಸಿ ಪರೀಕ್ಷಾ ಸಿದ್ಧತೆಯ ದೃಷ್ಠಿಯಿಂದ ಬಹಳ ಉಪಯುಕ್ತವಾಗಿದ್ದು, ರಾಜ್ಯದ ಎಲ್ಲಾ ವಿದ್ಯಾರ್ಥಿಗಳು ಇದರ ಸದುಯೋಗಪಡೆದುಕೊಂಡು ಉತ್ತಮ ಅಂಕ ಗಳಿಸಲು ಕೋರಲಾಗಿದೆ. ಆಪ್ ಡೌನ್‍ಲೋಡ್ ಮಾಡಿಕೊಳ್ಳಲು https://dietmandya.in/sslcmithra/ ಲಿಂಕ್‍ನ್ನು ಬಳಸಬೇಕು ಎಂದು ಡಯಟ್ ಡಯಟ್‍ನ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದಸ್ದಾರೆ.





