ಉದ್ಯಾವರ: ಹಾಜಿ ಸೂಫಿ ಇಬ್ರಾಹೀಂ ನಖಾನ್ ನಿಧನ
![ಉದ್ಯಾವರ: ಹಾಜಿ ಸೂಫಿ ಇಬ್ರಾಹೀಂ ನಖಾನ್ ನಿಧನ ಉದ್ಯಾವರ: ಹಾಜಿ ಸೂಫಿ ಇಬ್ರಾಹೀಂ ನಖಾನ್ ನಿಧನ](https://www.varthabharati.in/sites/default/files/images/articles/2021/07/6/297691-1625576772.jpeg)
ಮಂಜೇಶ್ವರ : ಉದ್ಯಾವರ ಮಾಡ ನಿವಾಸಿ, ಉದ್ಯಮಿ, ಉದ್ಯಾವರ 1000 ಜಮಾಅತ್ ಅಧ್ಯಕ್ಷರಾದ ಹಾಜಿ ಸೂಫಿ ಇಬ್ರಾಹೀಂ ನಖಾನ್ (75) ಅವರು ಅಲ್ಪಕಾಲದ ಅಸೌಖ್ಯದಿಂದ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಮಧ್ಯಾಹ್ನದ ಸುಮಾರಿಗೆ ನಿಧನರಾದರು.
ಸೂಫಿ ಇಬ್ರಾಹೀಂ ಅವರು ಅಲ್ ಸಖಫ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಇದರ ಅಧ್ಯಕ್ಷರೂ ಆಗಿದ್ದರು.
ಅವರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ, ಮೊಮ್ಮಕ್ಕಳು ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಸಂಸ್ಕಾರವು ಇಂದು ಸಂಜೆ 4.30ರ ಸುಮಾರಿಗೆ ಉದ್ಯಾವರ 1000 ಜಮಾಅತ್ ಖಬರ್ ಸ್ಥಾನದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story