ಮೂವರು ಆಟಗಾರರಿಗೆ ಕೋವಿಡ್-19: ಪಾಕಿಸ್ತಾನ ವಿರುದ್ಧ ಸರಣಿಗೆ ಹೊಸ ತಂಡ ಪ್ರಕಟಿಸಿದ ಇಂಗ್ಲೆಂಡ್

ಲಂಡನ್: ಪಾಕಿಸ್ತಾನ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ ಇಂಗ್ಲೆಂಡ್ ಸಂಪೂರ್ಣ ಹೊಸ ತಂಡವನ್ನು ಆಯ್ಕೆ ಮಾಡಿದೆ. ಮೂವರು ಆಟಗಾರರು ಹಾಗು ನಾಲ್ವರು ಸಿಬ್ಬಂದಿಗೆ ಕೋವಿಡ್ -19 ಪಾಸಿಟಿವ್ ಅಗಿದೆ ಎಂದು ದೇಶದ ಕ್ರಿಕೆಟ್ ಮಂಡಳಿ (ಇಸಿಬಿ) ಮಂಗಳವಾರ ತಿಳಿಸಿದೆ.
ಕಾರ್ಡಿಫ್‌ನಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ನಡೆಯುವ ಎರಡು ದಿನಗಳ ಮೊದಲು, ಬೆನ್ ಸ್ಟೋಕ್ಸ್ ನಾಯಕತ್ವದಲ್ಲಿ 18 ಆಟಗಾರರನ್ನು ಒಳಗೊಂಡ ತಂಡವನ್ನು ಪ್ರಕಟಿಸಲಾಗಿದೆ. ಇದರಲ್ಲಿ ಒಂಬತ್ತು ಆಟಗಾರರು ಹೊಸಬರು.
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯ ಮಳೆಗಾಹುತಿಯಾದ ಒಂದು ದಿನದ ನಂತರ ಇಂಗ್ಲೆಂಡ್ ತಂಡೆದ ಏಳು ಸದಸ್ಯರು ಸೋಮವಾರ ಬ್ರಿಸ್ಟಲ್‌ನಲ್ಲಿ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಆದರು.
ಇಂಗ್ಲೆಂಡ್-ಪಾಕಿಸ್ತಾನ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಜು.8ರಂದು ಕಾರ್ಡಿಫ್ ನಲ್ಲಿ ನಡೆಯಲಿದೆ.
ಇಂಗ್ಲೆಂಡ್ ತಂಡ : ಬೆನ್ ಸ್ಟೋಕ್ಸ್ (ನಾಯಕ), ಜೇಕ್ ಬಾಲ್, ಡ್ಯಾನಿ ಬ್ರಿಗ್ಸ್, ಬ್ರೈಡಾನ್ ಕಾರ್ಸ್, ಝಾಕ್ ಕ್ರಾವ್ಲೆ, ಬೆನ್ ಡಕೆಟ್, ಲೆವಿಸ್ ಗ್ರೆಗೊರಿ, ಟಾಮ್ ಹೆಲ್ಮ್, ವಿಲ್ ಜ್ಯಾಕ್ಸ್, ಡಾನ್ ಲಾರೆನ್ಸ್, ಸಾಕಿಬ್ ಮಹಮೂದ್, ಡೇವಿಡ್ ಮಲನ್, ಕ್ರೇಗ್ ಒವರ್ಟನ್, ಮ್ಯಾಟ್ ಪಾರ್ಕಿನ್ಸನ್, ಡೇವಿಡ್ ಪೇನ್, ಫಿಲ್ ಸಾಲ್ಟ್, ಜಾನ್ ಸಿಂಪ್ಸನ್, ಜೇಮ್ಸ್ ವಿನ್ಸ್