ದ.ಕ: ಜಿಲ್ಲೆಯಲ್ಲಿ ಮಂಗಳವಾರ ಕೋವಿಡ್ಗೆ 13 ಮಂದಿ ಬಲಿ, 216 ಮಂದಿಗೆ ಸೋಂಕು ದೃಢ
![ದ.ಕ: ಜಿಲ್ಲೆಯಲ್ಲಿ ಮಂಗಳವಾರ ಕೋವಿಡ್ಗೆ 13 ಮಂದಿ ಬಲಿ, 216 ಮಂದಿಗೆ ಸೋಂಕು ದೃಢ ದ.ಕ: ಜಿಲ್ಲೆಯಲ್ಲಿ ಮಂಗಳವಾರ ಕೋವಿಡ್ಗೆ 13 ಮಂದಿ ಬಲಿ, 216 ಮಂದಿಗೆ ಸೋಂಕು ದೃಢ](https://www.varthabharati.in/sites/default/files/images/articles/2021/07/6/297760-1625586618.gif)
ಸಾಂದರ್ಭಿಕ ಚಿತ್ರ
ಮಂಗಳೂರು, ಜು.6: ದ.ಕ.ಜಿಲ್ಲೆಯಲ್ಲಿ ಮಂಗಳವಾರವೂ ಕೋವಿಡ್ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಆದರೆ ಕೋವಿಡ್ ಸೋಂಕಿತರ ಸಂಖ್ಯೆ ಹಾಗೂ ಕೋವಿಡ್ ಪಾಸಿಟಿವಿಟಿ ಪ್ರಮಾಣದಲ್ಲಿ ತುಸು ಇಳಿಕೆ ಕಂಡು ಬಂದಿದೆ.
ಮಂಗಳವಾರ ಕೋವಿಡ್ಗೆ 13 ಮಂದಿ ಬಲಿಯಾಗಿದ್ದರೆ, 216 ಮಂದಿಯಲ್ಲಿ ಕೊರೋನ ಸೋಂಕು ದೃಢಪಟ್ಟಿದೆ. ಅಲ್ಲದೆ ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ.3.45ರಿಂದ 3.31ಕ್ಕಿಳಿದಿದೆ.
ಜಿಲ್ಲೆಯಲ್ಲಿ ಈವರೆಗೆ ಕೋವಿಡ್ಗೆ ಬಲಿಯಾದವರ ಸಂಖ್ಯೆ 1,268ಕ್ಕೇರಿದ್ದರೆ, ಕೊರೋನ ಸೋಂಕಿಗೊಳಗಾದವರ ಸಂಖ್ಯೆ 94,288ಕ್ಕೇರಿದೆ. ಅಲ್ಲದೆ ಮಂಗಳವಾರ 613 ಮಂದಿ ಕೊರೋನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಅದರಂತೆ ಈವರೆಗೆ ಗುಣಮುಖರಾದವರ ಸಂಖ್ಯೆ 90,185ಕ್ಕೇರಿದೆ. ಸದ್ಯ ಜಿಲ್ಲೆಯಲ್ಲಿ 2,835 ಸಕ್ರಿಯ ಪ್ರಕರಣವಿದೆ. ಜಿಲ್ಲೆಯಲ್ಲಿ ಈವರೆಗೆ 10,91,679 ಮಂದಿಯ ಗಂಟಲಿನ ದ್ರವ ಪರೀಕ್ಷೆ ಮಾಡಲಾಗಿದೆ. ಆ ಪೈಕಿ 9,97,391 ಮಂದಿಯ ವರದಿ ನೆಗೆಟಿವ್ ಬಂದಿದೆ.
ಬ್ಲ್ಯಾಕ್ ಫಂಗಸ್ನ 2 ಪ್ರಕರಣ ಪತ್ತೆ
ದ.ಕ.ಜಿಲ್ಲೆಯಲ್ಲಿ ಮಂಗಳವಾರ ಬ್ಲ್ಯಾಕ್ ಫಂಗಸ್ನ 2 ಪ್ರಕರಣ ಪತ್ತೆಯಾಗಿದೆ. ಚಿಕ್ಕಮಗಳೂರು ಮತ್ತು ಹಾವೇರಿ ಜಿಲ್ಲೆಯ ಇಬ್ಬರಲ್ಲಿ ಬ್ಲಾಕ್ ಫಂಗಸ್ ಕಂಡು ಬಂದಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 32ಕ್ಕೇರಿದೆ. ಅದರಲ್ಲಿ 7 ದ.ಕ. ಜಿಲ್ಲೆಗೆ ಮತ್ತು 25 ಮಂದಿ ಹೊರಜಿಲ್ಲೆಗೆ ಸೇರಿದವರಾಗಿದ್ದಾರೆ.
ಈವರೆಗೆ 36 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಅಲ್ಲದೆ ದ.ಕ.ಜಿಲ್ಲೆಯ 5 ಮತ್ತು ಹೊರಜಿಲ್ಲೆಯ 16 ಮಂದಿಯ ಸಹಿತ 21 ಮಂದಿ ಬ್ಲ್ಯಾಕ್ ಫಂಗಸ್ಗೆ ಬಲಿಯಾಗಿದ್ದಾರೆ.
ದಂಡ ವಸೂಲಿ: ಮಾಸ್ಕ್ ನಿಯಮ ಉಲ್ಲಂಘಿಸಿದ 78,682 ಮಂದಿಯಿಂದ 95,81,217 ರೂ. ದಂಡ ವಸೂಲು ಮಾಡಲಾಗಿದೆ.