ಲಾಕ್ಡೌನ್ ನಿಂದ ಆರ್ಥಿಕ ಸಂಕಷ್ಟ: ಕಿರು ನಾಟಕ ನಿದೇರ್ಶಕ ಆತ್ಮಹತ್ಯೆ
ಮೈಸೂರು, ಜು.6: ಲಾಕ್‍ಡೌನ್‍ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಕಿರು ನಾಟಕ ನಿರ್ದೇಶಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯನಗರದಲ್ಲಿ ನಡೆದಿದೆ.
ನವೀನ್ ಕುಮಾರ್ (32) ಆತ್ಮಹತ್ಯೆಗೆ ಶರಣಾದ ನಿರ್ದೇಶಕ. ಹಲವಾರು ನಾಟಕಗಳನ್ನು ನಿರ್ದೇಶನ ಮಾಡಿದ್ದ ನವೀನ್ ಕುಮಾರ್ ತನ್ನದೇ ಆದ ತಂಡವನ್ನು ರಚಿಸಿಕೊಂಡಿದ್ದರು. ಮೈಸೂರು ಹಾಗೂ ಬೆಂಗಳೂರಿನ ಕಲಾಮಂದಿರದಲ್ಲಿ ಸಾಕಷ್ಟು ಪ್ರದರ್ಶನ ನೀಡಿದ್ದ ನವೀನ್ ಲಾಕ್‍ಡೌನ್‍ನಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು ಎನ್ನಲಾಗಿದೆ.
ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





