ಸಚಿವ ಸಂಪುಟ ಪುನರ್ರಚನೆಗೆ ಮುಂಚಿತವಾಗಿ ಹೊಸ ಸಚಿವಾಲಯ ಸ್ಥಾಪಿಸಿದ ಕೇಂದ್ರ ಸರಕಾರ

ಹೊಸದಿಲ್ಲಿ: ಶೀಘ್ರವೇ ನಡೆಯುವ ಸಚಿವ ಸಂಪುಟ ಪುನರ್ರಚನೆಗೆ ಮುಂಚಿತವಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮಂಗಳವಾರ ಹೊಸ 'ಸಹಕಾರ ಸಚಿವಾಲಯ'ವನ್ನು ಸ್ಥಾಪಿಸಿದೆ.
'ಸಹಕಾರ್ ಸೆ ಸಮೃದ್ಧಿ' (ಸಹಕಾರದ ಮೂಲಕ ಸಮೃದ್ಧಿ) ಎಂಬ ದೂರದೃಷ್ಟಿಯನ್ನು ಸಾಕಾರಗೊಳಿಸುವ ಸಲುವಾಗಿ ಹೊಸ ಸಚಿವಾಲಯವನ್ನು ಸ್ಥಾಪಿಸಲಾಗಿದೆ.
ದೇಶದಲ್ಲಿ ಸಹಕಾರ ಆಂದೋಲನವನ್ನು ಬಲಪಡಿಸಲು ಮತ್ತು ಸಹಕಾರಕ್ಕಾಗಿ ವ್ಯವಹಾರ ಪ್ರಕ್ರಿಯೆಗಳನ್ನು ಸುಲಭಗೊಳಿಸಲು ಸಚಿವಾಲಯವು ಪ್ರತ್ಯೇಕ ಆಡಳಿತಾತ್ಮಕ, ಕಾನೂನು ಮತ್ತು ನೀತಿ ಚೌಕಟ್ಟನ್ನು ಒದಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
Next Story





