ಬಿಎಂಟಿಸಿ ನಿವೃತ್ತ ಪ್ರಧಾನ ವ್ಯವಸ್ಥಾಪಕ ದಸ್ತಗಿರ್ ಶರೀಫ್ ನಿಧನ
ಬೆಂಗಳೂರು, ಜು.6: ಬಿಎಂಟಿಸಿಯ ನಿವೃತ್ತ ಪ್ರಧಾನ ವ್ಯವಸ್ಥಾಪಕ ದಸ್ತಗಿರ್ ಶರೀಫ್(67) ಅವರು ಕಳೆದ ರಾತ್ರಿ ನಿಧನರಾಗಿದ್ದಾರೆ.
ಹೃದಯಾಘಾತದಿಂದ ನಿಧನರಾಗಿರುವ ಅವರು, ಪತ್ನಿ, ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿ ಸೇರಿ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಹುಟ್ಟುರಾದ ಆನೇಕಲ್‍ನಲ್ಲಿ ಅವರ ಪ್ರಾರ್ಥಿವ ಶರೀರದ ಅಂತ್ಯಕ್ರಿಯೆ ನೆರವೇರಿತು. ಕೆಎಸ್ಸಾರ್ಟಿಸಿ, ಬಿಎಂಟಿಸಿಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಉತ್ತಮ ಅಧಿಕಾರಿ ಎಂದು ಮನ್ನಣೆ ಗಳಿಸಿದ್ದರು. ಸಾರ್ವಜನಿಕರು, ಪ್ರಯಾಣಿಕರ ಕುಂದುಕೊರತೆಗಳಿಗೆ ತಕ್ಷಣವೇ ಸ್ಪಂದಿಸುವ ಜನಾನುರಾಗಿ ಆಗಿದ್ದರು.
Next Story





