ಕೋವಿಡ್ ಲಸಿಕೆ ಫಲಾನುಭವಿಗಳ ಪರಿಶೀಲನೆಗೆ ಮುಖ ಗುರುತು ಪತ್ತೆ ತಂತ್ರಜ್ಞಾನ ಬಳಕೆ
ಆರ್ಟಿಐ ಅರ್ಜಿಗೆ ಕೇಂದ್ರದ ಪ್ರತಿಕ್ರಿಯೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಜು. 6: ಕೋವಿಡ್ ಲಸಿಕಾ ಕೇಂದ್ರದಲ್ಲಿ ಫಲಾನುಭವಿಗಳನ್ನು ಆನ್ಲೈನ್ನಲ್ಲಿ ಪರಿಶೀಲನೆ ನಡೆಸಲು ಮುಖ ಗುರುತು ಪತ್ತೆ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಆದರೆ, ಈ ತಂತ್ರಜ್ಞಾನ ಬಳಸಲು ಕಾನೂನು ಅಥವಾ ಶಾಸಕಾಂಗ ಪ್ರಾಧಿಕಾರದ ಮೂಲಕ ಆದೇಶ ನೀಡುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ.
ಮುಖ ಗುರುತು ಪತ್ತೆ ತಂತ್ರಜ್ಞಾವನ್ನು ಬಳಸುವುದರಿಂದ ಖಾಸಗಿತನದ ಮೇಲೆ ಉಂಟಾಗುವ ಪರಿಣಾಮದ ಬಗ್ಗೆ ಇದುವರೆಗೆ ವೌಲ್ಯಮಾಪನ ಮಾಡಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕೋವಿಡ್ ಲಸಿಕೆ ನೀಡುವ ಮೊದಲು ಫಲಾನುಭವಿಗಳನ್ನು ಆಲ್ಲೈನ್ ಮೂಲಕ ಪರಿಶೀಲನೆ ನಡೆಸಲು ಆಧಾರ್ ದೃಢೀಕರಣದ ಮಾದರಿಯಲ್ಲೇ ಮುಖ ಗುರುತು ದೃಢೀಕರಣವನ್ನು ಬಳಸಲಾಗುತ್ತದೆ. ಇದರಲ್ಲಿ ಫಲಾನುಭವಿಗಳ ಮುಖದ ಭಾವಚಿತ್ರ ಸೆರೆ ಹಿಡಿಯಲಾಗುತ್ತದೆ ಹಾಗೂ ಪರಿಶೀಲನೆಗಾಗಿ ಯುಐಡಿಎಐಗೆ ಕಳುಹಿಸಿಕೊಡಲಾಗುತ್ತದೆ ಎಂದು ಸರಕಾರೇತರ ಸಂಘಟನೆಯಾದ ಇಂಟರ್ನೆಟ್ ಫ್ರೀಡಂ ಫೌಂಡೇಶನ್ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಸಲ್ಲಿಸಲಾದ ಮನವಿಗೆ ಕೇಂದ್ರ ಆರೋಗ್ಯ ಸಚಿವಾಲಯ ಈ ಪ್ರತಿಕ್ರಿಯೆ ನೀಡಿದೆ.
ಈ ತಂತ್ರಜ್ಞಾನವನ್ನು ಅನುಷ್ಠಾನಗೊಳಿಸಲು ಹೆಚ್ಚುವರಿ ಖರೀದಿ ಮಾಡಿಲ್ಲ. ಇಂತಹ ದೃಢೀಕರಣಕ್ಕೆ ಪೈಲಟ್ ಯೋಜನೆಯೊಂದು ಈಗಲೂ ನಡೆಯುತ್ತಿದೆ ಎಂದು ಸಚಿವಾಲಯ ತಿಳಿಸಿದೆ. ‘‘ಆದರೆ, ಆರೋಗ್ಯ ಸಚಿವಾಲಯ ಮುಖ ಗುರುತು ಪತ್ತೆ ತಂತ್ರಜ್ಞಾನ ಬಳಸಲು ಯಾವುದೇ ಶಾಸಕಾಂಗ ಅಥವಾ ಕಾನೂನು ಆದೇಶವನ್ನು ಸೂಚಿಸುವ ಅಥವಾ ಪ್ರಸಕ್ತ ಖಾಸಗಿತನದ ಮೇಲಿನ ಪರಿಣಾಮದ ವೌಲ್ಯಮಾನಪದ ಕುರಿತ ಯಾವುದೇ ಪ್ರತಿಯನ್ನು ಅದು ಒದಗಿಸಿಲ್ಲ ಎಂದು’’ ಎಂದು ಇಂಟರ್ನೆಟ್ ಫ್ರೀಡಂ ಫೌಂಡೇಶನ್ ತಿಳಿಸಿದೆ.
‘‘ವೆರಿಫೈಯರ್ ಹಾಗೂ ವ್ಯಾಕ್ಸಿನೇಟರ್ ಮಾಡ್ಯುಲ್ನ ಬಳಕೆದಾರರ ಕೈಪಿಡಿ’’ ಹಾಗೂ ಕೋವಿನ್ ಪೋರ್ಟಲ್ನ ನಿಯಮಗಳಿಗೆ ಅನುಗುಣವಾಗಿ ಈ ತಂತ್ರಜ್ಞಾನ ಬಳಸಲಾಗುತ್ತಿದೆ ಎಂದು ಆರ್ಟಿಐ ಅರ್ಜಿಗೆ ಕೇಂದ್ರ ಸರಕಾರ ಪ್ರತಿಕ್ರಿಯೆ ನೀಡಿದೆ.







