ಕೇಂದ್ರದಿಂದ ತಿಂಗಳಿಗೆ ಕೋವಿಡ್ ಲಸಿಕೆಯ 3ಕೋಟಿ ಡೋಸ್ ಪೂರೈಸುವಂತೆ ಕೋರಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

ಮುಂಬೈ, ಜು. 6: ಸಂಭಾವ್ಯ ಕೊರೋನ ಸೋಂಕಿನ ಮೂರನೇ ಅಲೆಯ ಪರಿಣಾಮ ಕಡಿಮೆ ಮಾಡಲು ರಾಜ್ಯಕ್ಕೆ ಪ್ರತಿ ತಿಂಗಳು ಕನಿಷ್ಠ 3 ಕೋಟಿ ಕೋವಿಡ್ ಲಸಿಕೆಯ ಡೋಸ್ ಪೂರೈಸುವಂತೆ ಕೇಂದ್ರ ಸರಕಾರವನ್ನು ಕೋರಿ ಮಹಾರಾಷ್ಟ್ರ ವಿಧಾನ ಸಭೆ ಮಂಗಳವಾರ ನಿರ್ಣಯ ಅಂಗೀಕರಿಸಿದೆ. ಸದನದಲ್ಲಿ ನಿರ್ಣಯ ಮಂಡಿಸಿದ ಆರೋಗ್ಯ ಸಚಿವ ರಾಜೇಶ್ ಟೋಪೆ, ಪ್ರತಿ ದಿನ 10 ಲಕ್ಷ ಜನರಿಗೆ ಲಸಿಕೆ ನೀಡಲು ರಾಜ್ಯದ ಆಡಳಿತ ವ್ಯವಸ್ಥೆ ಹೊಂದಿದೆ ಎಂದರು.
ಇದರೊಂದಿಗೆ ನಾವು ಮುಂದಿನ ಎರಡು ತಿಂಗಳಲ್ಲಿ 3 ಕೋಟಿ ಜನರಿಗೆ ಲಸಿಕೆ ನೀಡಲು ಸಾಧ್ಯವಾಗಲಿದೆ. ಲಸಿಕೆ ನೀಡುವುದನ್ನು ತ್ವರಿತಗೊಳಿಸುವುದು ಆರ್ಥಿಕ ಪುನರುಜ್ಜೀವನಕ್ಕೂ ಅಗತ್ಯವಾಗಿದೆ ಎಂದು ಅವರು ಹೇಳಿದರು. ಕೇಂದ್ರ ಸರಕಾರ ಇದುವರೆಗೆ ಲಸಿಕೆಯ 2,84,39,060 ಡೋಸ್ಗಳನ್ನು ಪೂರೈಸಿದೆ. ರಾಜ್ಯ ಸರಕಾರ 25,10,730 ಡೋಸ್ಗಳನ್ನು ಖರೀದಿಸಿದೆ. ಇದುವರೆಗೆ ಜನರಿಗೆ 3,43,82,583 ಡೋಸ್ ನೀಡಲಾಗಿದೆ ಎಂದು ಟೋಪೆ ಹೇಳಿದರು.
Next Story





