ಕೋಲಾರ: ಮಹಿಳೆ ಮೇಲೆ ಹಲ್ಲೆ; ದೂರು
ಕೋಲಾರ, ಜು.6: ತಾಲೂಕಿನ ಕೋಟಿಗಾನಹಳ್ಳಿ ಗ್ರಾಮದಲ್ಲಿ ಜಮೀನಿನ ವಿವಾದದಲ್ಲಿ ಮಹಿಳೆಯ ಮೇಲೆ ಹಲ್ಲೆ ಮಾಡಿರುವ ಪೊಲೀಸ್ ಅಧಿಕಾರಿ ಕೆ.ವಿ.ಅಶೋಕ್ ಮತ್ತು ರೈತ ಸೇನೆ ಜಿಲ್ಲಾಧ್ಯಕ್ಷ ಕೋಟಿಗಾನಹಳ್ಳಿ ಗಣೇಶ್ ಗೌಡ ಹಾಗೂ ಇನ್ನಿತರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹಲ್ಲೆಗೊಳಗಾದ ಮಹಿಳೆ ಶಿಲ್ಪಾ ಮಂಜುನಾಥ್ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿರುವ ಪೊಲೀಸ್ ಅಧಿಕಾರಿ ಕೆ.ವಿ. ಅಶೋಕ್ ಹಾಗೂ ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ವೈ. ಗಣೇಶ್‌ಗೌಡ ಅವರಿಗೂ ಹಾಗೂ ದೊಡ್ಡಪ್ಪನ ಮಕ್ಕಳಾದ ಮಂಜುನಾಥ್, ರವಿ ಅವರಿಗೆ ಸೇರಿದ ಒಟ್ಟು ಕುಟುಂಬದ ಸ್ವತ್ತುಗಳ ಮೇಲೆ ನ್ಯಾಯಲಯದಲ್ಲಿ ದಾವೆ ಇದೆ.
ನಾವು ನಮ್ಮ ಭಾಗದ ಜಮೀನಿನಲ್ಲಿ ಉಳುಮೆ ಮಾಡಲು ಹೋದಾಗ ನಾನು, ಗಂಡ ಮಂಜುನಾಥ್ ಮತ್ತು ಕುಟುಂಬದವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
Next Story





