ದ.ಕ.ಜಿಲ್ಲೆಯಲ್ಲಿ ಜು.8ರಂದು ವಿದ್ಯಾರ್ಥಿಗಳಿಗೆ ಲಸಿಕಾ ಶಿಬಿರ ಇಲ್ಲ; ಡಿಎಚ್ಒ
![ದ.ಕ.ಜಿಲ್ಲೆಯಲ್ಲಿ ಜು.8ರಂದು ವಿದ್ಯಾರ್ಥಿಗಳಿಗೆ ಲಸಿಕಾ ಶಿಬಿರ ಇಲ್ಲ; ಡಿಎಚ್ಒ ದ.ಕ.ಜಿಲ್ಲೆಯಲ್ಲಿ ಜು.8ರಂದು ವಿದ್ಯಾರ್ಥಿಗಳಿಗೆ ಲಸಿಕಾ ಶಿಬಿರ ಇಲ್ಲ; ಡಿಎಚ್ಒ](https://www.varthabharati.in/sites/default/files/images/articles/2021/07/7/297923-1625672705.gif)
ಸಾಂದರ್ಭಿಕ ಚಿತ್ರ
ಮಂಗಳೂರು.ಜು.7: ದ.ಕ.ಜಿಲ್ಲೆಯಲ್ಲಿ ಪ್ರತೀ ಗುರುವಾರ ಮಕ್ಕಳ ಚುಚ್ಚುಮದ್ದು ಲಸಿಕಾ ಕಾರ್ಯಕ್ರಮವಿರುವುದರಿಂದ ಕಾಲೇಜು ವಿದ್ಯಾರ್ಥಿಗಳ ಲಸಿಕಾ ಶಿಬಿರವು ಜು.8ರಂದು ಜಿಲ್ಲೆಯ ಯಾವುದೇ ಕಾಲೇಜಿನಲ್ಲಿ ನಡೆಯುವುದಿಲ್ಲ ಎಂದು ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮಂಗಳೂರು ತಾಲೂಕನ್ನು ಹೊರತು ಪಡಿಸಿ ಉಳಿದ ಎಲ್ಲಾ ತಾಲೂಕು ವ್ಯಾಪ್ತಿಯಲ್ಲಿ ಬರುವ ಆರೋಗ್ಯ ಕೇಂದ್ರ, ಉಪಕೇಂದ್ರದಲ್ಲಿ ಕೋವಿಡ್ ಲಸಿಕಾ ಶಿಬಿರವು ನಡೆಯಲಿದೆ. ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಕೋವಿಶೀಲ್ಡ್ 2ನೇ ಡೋಸ್ ಲಸಿಕಾ ಫಲಾನುಭವಿಗಳಿಗೆ ಹಾಗೂ ಎನ್ಆರ್ಐ ಫಲಾನುಭವಿಗಳಿಗೆ ಮಾತ್ರ ಲಸಿಕೆಯನ್ನು ನೀಡಲಾಗುವುದು. ಕೋವ್ಯಾಕ್ಸಿನ್ ಲಸಿಕೆಯು 45 ವರ್ಷ ಮೇಲ್ಪಟ್ಟವರಿಗೆ ಪ್ರಥಮ ಡೋಸ್ ಮತ್ತು ಎರಡನೆಯ ಡೋಸ್ ಲಭ್ಯವಿದೆ.
ನಗರದ ಕದ್ರಿ ಶಿವಭಾಗ್ನ ಇಎಸ್ಐ ಆಸ್ಪತ್ರೆಯಲ್ಲಿ ಎರಡನೇ ಡೋಸ್ ಲಸಿಕಾ ಫಲಾನುಭವಿಗಳು ಮತ್ತು ಕಾಲೇಜು ಲಸಿಕಾ ಶಿಬಿರದಲ್ಲಿ ಲಸಿಕೆಯನ್ನು ಪಡೆಯದ ವಿದ್ಯಾರ್ಥಿಗಳು ಇಎಸ್ಐ ಆಸ್ಪತ್ರೆಯಲ್ಲಿ ಲಸಿಕೆಯನ್ನು ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.