ದ.ಕ. ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ಕಾರ್ಯಾಚರಣೆ
ಮಂಗಳೂರು, ಜು.8: ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತನಿಖಾ ದಳ ಕೊಟ್ಪಾ-2003ರ ಕಾಯ್ದೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಾಗೂ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಗುರುವಾರ ನಗರದ ಬರ್ಕೆ, ಉರ್ವ ಹಾಗೂ ಗಾಂಧಿನಗರ ಶಾಲಾ ಪರಿಸರದಲ್ಲಿ ಕಾರ್ಯಾಚರಣೆ ನಡೆಸಿತು.
ಸಾರ್ವಜನಿಕ ಸ್ಥಳಗಳಲ್ಲಿ ಜಗಿಯುವ ತಂಬಾಕು ಸೇವನೆ ಹಾಗೂ ಕೊಟ್ಪಾ ಕಾಯ್ದೆ ಉಲ್ಲಂಘನೆ ವಿರುದ್ಧ ಕಾರ್ಯಚರಣೆ ನಡೆಸಿ ಸೆಕ್ಷನ್ 4, 6ಎ ಹಾಗೂ 6ಬಿ ಪ್ರಕಾರ 17 ರ ಪ್ರಕಾರ ಪ್ರಕರಣ ದಾಖಲಿಸಿ 2,400 ರೂ.ಗಳ ದಂಡ ವಿಧಿಸಲಾಯಿತು. ಅಲ್ಲದೆ ಕಾಯ್ದೆಯ ಬಗ್ಗೆ ಅಂಗಡಿ ಮಾಲಕರಿಗೆ ಅರಿವು ಮೂಡಿಸಲಾಯಿತು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ಡಾ. ಹನುಮಂತ ರಾಯಪ್ಪ, ಸಾಮಾಜಿಕ ಕಾರ್ಯಕರ್ತೆ ಶ್ರುತಿ ಸಾಲ್ಯಾನ್, ಸಿಬ್ಬಂದಿ ವಿದ್ಯಾ, ಆರೋಗ್ಯ ಮೇಲ್ವಚಾರಕ ಪ್ರದೀಪ್, ಆಪ್ತ ಸಮಾಲೋಚಕ ವಿಜಯ್ ಕುಮಾರ್, ಬರ್ಕೆ ಠಾಣೆಯ ಶಶಿಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.
Next Story





