6 ತಿಂಗಳಲ್ಲಿ 58.9 ಕೋಟಿ ರೂ. ದಂಡ ವಸೂಲಿ ಮಾಡಿದ ಬೆಂಗಳೂರು ಟ್ರಾಫಿಕ್ ಪೊಲೀಸರು

ಬೆಂಗಳೂರು, ಜು.8: ಸಂಚಾರ ನಿಯಮ ಉಲ್ಲಂಘನೆ ಸಂಬಂಧ ನಗರದ ಸಂಚಾರ ಪೊಲೀಸರು ಆರು ತಿಂಗಳಿನಲ್ಲಿ ಸುಮಾರು 58 ಕೋಟಿ ರೂ. ದಂಡ ಸಂಗ್ರಹಿಸಿದ್ದಾರೆ.
ಕೋವಿಡ್ ಎರಡನೆ ಅಲೆಯಲ್ಲಿ ಪ್ರಕರಣಗಳು ಹೆಚ್ಚಾಗಿದ್ದ ಪರಿಣಾಮ, ಮೇ 10ರಿಂದ ಜೂನ್ 14ರವರೆಗೆ ಸಂಪೂರ್ಣ ಲಾಕ್‍ಡೌನ್ ವಿಧಿಸಲಾಗಿತ್ತು. ಆದರೆ ಈ ಅವಧಿಯಲ್ಲಿಯೂ ಕೂಡಾ ಭಾರೀ ದಂಡ ಸಂಗ್ರಹ ಮಾಡಲಾಗಿದ್ದು, ಒಟ್ಟಾರೆ ಆರು ತಿಂಗಳಿನಲ್ಲಿ ಪೊಲೀಸರು ಒಟ್ಟು 58.9 ಕೋಟಿ ರೂ. ದಂಡ ವಸೂಲಿ ಮಾಡಿದ್ದಾರೆ.
ಮೋಟಾರು ವಾಹನ ಕಾಯ್ದೆ ಉಲ್ಲಂಘನೆ, ಕರ್ನಾಟಕ ಪೊಲೀಸ್ ಕಾಯ್ದೆ, ಕರ್ನಾಟಕ ಟ್ರಾಫಿಕ್ ಕಾಯ್ದೆ, ಟೋಯಿಂಗ್ ದಂಡ ಸೇರಿ ಹಲವು ವಿಧಗಳಿಂದ ದಂಡ ವಸೂಲಿ ಮಾಡಿದ್ದಾರೆ ಎಂದು ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Next Story





