ಪಡುಬಿದ್ರಿ ರೋಟರಿ ಅಧ್ಯಕ್ಷರಾಗಿ ನಿಯಾಝ್ ಆಯ್ಕೆ

ನಿಯಾಝ್
ಪಡುಬಿದ್ರಿ: ಪಡುಬಿದ್ರಿ ರೋಟರಿ ಕ್ಲಬ್ನ ಅಧ್ಯಕ್ಷರಾಗಿ ಪಡುಬಿದ್ರಿ ಗ್ರಾಮ ಪಂಚಾಯಿತಿ ಸದಸ್ಯ ನಿಯಾಝ್ ಆಯ್ಕೆಯಾಗಿದ್ದಾರೆ.
2020-21ರಲ್ಲಿ ಕಾರ್ಯದರ್ಶಿಯಾಗಿದ್ದ ಇವರು, 2021-22ನೇ ಸಾಲಿಗೆ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಇವರು, ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ವಲಯದ ಉಪಾಧ್ಯಕ್ಷರಾಗಿ, ಪಡುಬಿದ್ರಿ ಯೂತ್ ಫೌಂಡೇಶನ್ನ ಪ್ರಧಾನ ಕಾರ್ಯದರ್ಶಿಯಾಗಿ ಉಡುಪಿ ಜಿಲ್ಲಾ ಯೂತ್ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ, ಪಡುಬಿದ್ರಿ ಮೊಹಮ್ಮಡನ್ ಬ್ಯಾಡ್ಮಿಂಟನ್ ಮೊಹಮ್ಮಡನ್ ಹೆಲ್ಪಿಂಗ್ ಅಸೋಸಿಯೇಶನ್ ಇದರ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತಿದ್ದಾರೆ.
ಕಾರ್ಯದರ್ಶಿಯಾಗಿ ಸರಸ್ವತಿ ಮಂದಿರ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಬಿ.ಎಸ್. ಆಚಾರ್ಯ ಆಯ್ಕೆಯಾಗಿದ್ದಾರೆ.
ಪದಗ್ರಹಣ: ಜುಲೈ 10ರಂದು ನಿಯಾಝ್ ಮತ್ತು ತಂಡದ ಪದಗ್ರಹಣ ಸಮಾರಂಭ ನಡೆಯಲಿದೆ. ಪದಗ್ರಹಣ ಅಧಿಕಾರಿಯಾಗಿ ರೋಟರಿ ಸಮ್ಮೇಳನ ಚೆಯರ್ಮೆನ್ ಅಲೆನ್ ಲಿವೈಸ್ ಭಾಗವಹಿಸಲಿದ್ದಾರೆ. ಝೋನಲ್ ಅಸಿಸ್ಟೆಂಟ್ ಗವರ್ನರ್ ಡಾ. ಅರುಣ್ ಹೆಗ್ಡೆ, ವಲಯ ಸೇನಾನಿ ಸುರೇಂದ್ರ ನಾಯಕ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.





