ಪುಣೆ ಭೂ ವ್ಯವಹಾರ ಪ್ರಕರಣ: ಈ.ಡಿ. ಮುಂದೆ ಹಾಜರಾದ ಎನ್ಸಿಪಿ ನಾಯಕ ಏಕನಾಥ್ ಖಡ್ಸೆ
ಮುಂಬೈ, ಜು. 8: ಪುಣೆಯ ಭೊಸಾರಿಯಲ್ಲಿ ಭೂ ವ್ಯವಹಾರಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆ ಕುರಿತು ಮಹಾರಾಷ್ಟ್ರದ ಮಾಜಿ ಕಂದಾಯ ಸಚಿವ ಹಾಗೂ ಎನ್ಸಿಪಿ ನಾಯಕ ಏಕನಾಥ್ ಖಡ್ಸೆ ಅವರು ಗುರುವಾರ ಇಲ್ಲಿನ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಏಕಾಂತ ಖಡ್ಸೆ ಅವರ ಅಳಿಯ ಗಿರೀಶ್ ಚೌಧರಿ ಅವರನ್ನು ಜಾರಿ ನಿರ್ದೇಶನಾಲಯ (ಈ.ಡಿ.) ಬುಧವಾರ ಬಂಧಿಸಿದ ಒಂದು ದಿನದ ಬಳಿಕ ಏಕನಾಥ್ ಖಡ್ಸೆ ಅವರು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ರಾಜಕೀಯ ಪ್ರೇರಿತ ಎಂದು ದಕ್ಷಿಣ ಮುಂಬೈಯ ಬಲ್ಲಾರ್ಡ್ ಎಸ್ಟೇಟ್ ಪ್ರದೇಶದಲ್ಲಿರುವ ಜಾರಿ ನಿರ್ದೇಶನಾಲಯದ ರೆನಲ್ ಕಚೇರಿಯ ಹೊರಗೆ ಏಕನಾಥ್ ಖಡ್ಸೆ ಸುದ್ದಿಗಾರರಿಗೆ ತಿಳಿಸಿದ್ದಾರೆ. ಗಿರೀಶ್ ಚೌಧರಿಯನ್ನು ಬಂಧಿಸಿದ ಬಳಿಕ ಹೇಳಿಕೆ ಪಡೆಯಲು ಜಾರಿ ನಿರ್ದೇಶನಾಲಯ ಏಕನಾಥ್ ಖಡ್ಸೆ ಅವರಿಗೆ ಸಮನ್ಸ್ ಜಾರಿಗೊಳಿಸಿತ್ತು.
Next Story





