ಸಚಿವ ಗೋಪಾಲಯ್ಯರ ತಾಯಿ ಕಾಳಮ್ಮ ಚನ್ನಿಗಪ್ಪ ನಿಧನ
ಬೆಂಗಳೂರು, ಜು.9: ಅಬಕಾರಿ ಸಚಿವ ಕೆ. ಗೋಪಾಲಯ್ಯ ಅವರ ತಾಯಿ ಕಾಳಮ್ಮ ಚನ್ನಿಗಪ್ಪ ಶುಕ್ರವಾರ ನಿಧನರಾಗಿದ್ದಾರೆ.
ಸಚಿವ ಗೋಪಾಲಯ್ಯ ಅವರ ಬೆಂಗಳೂರಿನ ವೃಷಭಾವತಿ ನಗರ ಕಾಮಾಕ್ಷಿಪಾಳ್ಯದಲ್ಲಿರುವ ಸ್ವಗೃಹದಲ್ಲಿ ಮಧ್ಯಾಹ್ನದವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನಂತರ ಸಂಜೆ 3 ಗಂಟೆಗೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಬಿಎಂ ರಸ್ತೆ ಹಾಲಪ್ಪನಗುಡ್ಡೆ ಬಳಿಯಿರುವ ಚನ್ನಿಗಪ್ಪ ಕಾಳಮ್ಮ ಫಾರ್ಮ್‍ನಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಸಿಎಂ ಸಂತಾಪ: ಸಚಿವ ಗೋಪಾಲಯ್ಯ ಅವರ ತಾಯಿ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಇತರ ಸಚಿವರು, ಶಾಸಕರು, ಹಾಗೂ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
Next Story





