ಜು.11ಕ್ಕೆ ನೇತಾಜಿ ಸ್ಪೋರ್ಟ್ಸ್ ಕ್ಲಬ್‌ನಿಂದ ಪಿಯು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಶಿಬಿರ
ಉಡುಪಿ, ಜು.9: ಮಂಗಳೂರಿನ ದಿ ಕ್ಯಾಂಪಸ್ ಕರಿಯರ್ ಅಕಾಡೆಮಿಯು ಸಾಗರದ ಇದಿನಬ್ಬ ಫೌಂಡೇಶನ್’ನ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ‘ಕರ್ನಾಟಕ ಕೆರಿಯರ್ ಯಾತ್ರಾ’ ಅಂಗವಾಗಿ ಉಡುಪಿ ಜಿಲ್ಲೆಯ ಪಿಯುಸಿ ವಿದ್ಯಾರ್ಥಿಗಳಿಗೆ ‘ಪಿಯುಸಿ ನಂತರ ಮುಂದೇನು’ ಎಂಬ ಕರಿಯರ್ ಮಾರ್ಗದರ್ಶನ ಶಿಬಿರವನ್ನು ಪರ್ಕಳದ ನೇತಾಜಿ ಸ್ಪೋಟ್ಸರ್ ಕ್ಲಬ್ ಆಯೋಜಿಸಿದೆ.
ಜುಲೈ 11ರಂದು ಬೆಳಿಗ್ಗೆ 10 ಗಂಟೆಗೆ ಝೂಮ್ (ಮೀಟಿಂಗ್ ಐಡಿ: 85055297129, ಪಾಸ್ಕೋಡ್: 901200) ಮೂಲಕ ನಡೆಯಲಿರುವ ಶಿಬಿರದಲ್ಲಿ ಕೆರಿಯರ್ ಪ್ಲಾನಿಂಗ್ ಮಾಡುವುದು ಯಾಕೆ? ಮತ್ತು ಹೇಗೆ?, ಅತ್ಯುತ್ತಮ ಕೋರ್ಸ್ ಆಯ್ಕೆ ಮಾಡುವುದು ಹೇಗೆ?, ಪಿಯುಸಿ ಬಳಿಕ ಲಭ್ಯವಿರುವ ಕೋರ್ಸುಗಳೇನು?, ಸರಕಾರದ ವಿವಿಧ ಇಲಾಖೆಗಳಲ್ಲಿ ವಿದ್ಯಾರ್ಥಿ ಗಳಿಗಿರುವ ಯೋಜನೆಗಳೇನು? ಮತ್ತಿತರ ವಿಷಯಗಳ ಕುರಿತಂತೆ ಮಾಹಿತಿ, ಮಾರ್ಗದರ್ಶನ ನೀಡಲಾಗುವುದು.
ಪ್ರವೇಶ ಉಚಿತವಾಗಿರುವ ಶಿಬಿರದಲ್ಲಿ ರಾಜ್ಯದ ಖ್ಯಾತ ಕೆರಿಯರ್ ಕೌನ್ಸಿಲರ್ ಮಂಗಳೂರಿನ ಉಮರ್ ಯು.ಹೆಚ್. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿ ಸಲಿದ್ದು, ಹೆಚ್ಚಿನ ಮಾಹಿತಿಗಳಿಗಾಗಿ ಮೊ. ಸಂ.:9448252703ಗೆ ಕರೆ ಮಾಡಬಹುದು ಎಂದು ನೇತಾಜಿ ಸ್ಪೋಟ್ಸರ್ ಕ್ಲಬ್ನ ಪ್ರಕಟಣೆ ತಿಳಿಸಿದೆ.





