ಉಡುಪಿ: ಕಲಾವಿದರಿಗೆ ಆಹಾರದ ಕಿಟ್ ವಿತರಣೆ
ಉಡುಪಿ, ಜು. 9: ಪ್ರವರ ಹಾಗೂ ಅಶ್ವಘೋಷ ಥಿಯೇಟರ್ ಬೆಂಗಳೂರು ಪ್ರಾಯೋಜಕತ್ವದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿಯ ಸಹಕಾರ ದಲ್ಲಿ ಉಡುಪಿ ಜಿಲ್ಲೆಯ 35 ನಾಟಕ ಹಾಗೂ ಯಕ್ಷಗಾನ ಕಲಾವಿದರಿಗೆ ಸುಮಾರು 1000 ರೂ.ಮೊತ್ತದ ಆಹಾರದ ಕಿಟ್‌ಗಳನ್ನು ವಿತರಿಸಲಾಯಿತು.
ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ್ ಶೆಣೈ, ಉಪಾಧ್ಯಕ್ಷ ಮಧುಸೂದನ್ ಹೇರೂರು ಕಿಟ್‌ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಸಂಚಾಲಕ ರವಿರಾಜ್ ಎಚ್.ಪಿ , ಯಕ್ಷಗಾನ ಕಲಾವಿದ ಶಾಂತಾರಾಮ್ ಉಪಸ್ಥಿತರಿದ್ದರು.
Next Story





