ಚಿಕ್ಕಬಳ್ಳಾಪುರ: ಎಸಿಬಿ ಇಲಾಖೆ ಕಚೇರಿ ಸ್ಥಳಾಂತರ
ಚಿಕ್ಕಬಳ್ಳಾಪುರ: ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯು ನಂ. 227/2ಎ, ಶ್ರೀ. ಅನಂತಧಾಮ ನಿಲಯ, ಸರ್ ಎಂ. ವಿ. ರಸ್ತೆ, 2ನೇ ಕ್ರಾಸ್,ಹಳೆ ರೇಷ್ಮೆ ಗೂಡು ಮಾರುಕಟ್ಟೆ ರಸ್ತೆ, 19ನೇ ವಾರ್ಡ್, ಚಿಕ್ಕಬಳ್ಳಾಪುರ ನಗರ ಇಲ್ಲಿ ಕಾರ್ಯನಿರ್ವಹಿಸುವತ್ತಿದ್ದು, ಸಾರ್ವಜನಿಕ ಅನುಕೂಲಕ್ಕಾಗಿ ದಿನಾಂಕ:02-06-2021 ರಿಂದ ಚಿಕ್ಕಬಳ್ಳಾಪುರ ನಗರದ ಬಿ. ಬಿ ರಸ್ತೆಯ ಕೆ. ಎಸ್. ಆರ್. ಟಿ. ಸಿ. ಬಸ್ ನಿಲ್ದಾಣದ ಮುಂಭಾಗ ಲೋಕೋಪಯೋಗಿ ಇಲಾಖೆಯ ಕಟ್ಟಡಕ್ಕೆ ಸ್ಥಳಾಂತರಿಸಿದ್ದು, ಸಾರ್ವಜನಿಕರು ಎಂದಿನಂತೆ ಸಹಕರಿಸಬೇಕೆಂದು ಚಿಕ್ಕಬಳ್ಳಾಪುರ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಉಪಾಧೀಕ್ಷಕರಾದ ಆರ್.ಮಂಜುನಾಥ್ ರವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





