ವಿದ್ಯುತ್ ಸ್ಥಾವರ ಕುರಿತ ಕೇಂದ್ರದ ಅಧಿಸೂಚನೆ ವಿರುದ್ಧ ರಾಜ್ಯದ ಪಿಐಎಲ್ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಜು. 9: ವಿದ್ಯುತ್ ಸ್ಥಾವರದ ಕುರಿತು ಕೇಂದ್ರ ಪರಿಸರ ಸಚಿವಾಲಯದ ಅಧಿಸೂಚನೆ ವಿರುದ್ಧ ದಿಲ್ಲಿ ಸರಕಾರ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ದಾವೆ (ಪಿಐಎಲ್)ಯ ಆಲಿಕೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
ರಾಜ್ಯ ಸರಕಾರ ಕೇಂದ್ರ ಸರಕಾರದ ವಿರುದ್ಧ ಇಂತಹ ಮನವಿ ಸಲ್ಲಿಸಿರುವುದಕ್ಕೆ ಸುಪ್ರೀಂ ಕೋರ್ಟ್ ಅಚ್ಚರಿ ವ್ಯಕ್ತಪಡಿಸಿತು. ನ್ಯಾಯಾಲಯದ ಈ ಅಭಿಪ್ರಾಯದ ಹಿನ್ನೆಲೆಯಲ್ಲಿ ದಿಲ್ಲಿ ಸರಕಾರ ತನ್ನ ಮನವಿಯನ್ನು ಹಿಂಪಡೆಯಿತು.
‘‘ಒಂದು ವೇಳೆ ಕೇಂದ್ರ ಸರಕಾರ ಏನನ್ನಾದರೂ ಹೇಳಿದರೆ ಅಥವಾ ವಿರುದ್ಧವಾದುದನ್ನು ಮಾಡಿದರೆ, ಆಗ ನೀವು (ದಿಲ್ಲಿ ಸರಕಾರ) ನ್ಯಾಯಾಲಯದ ಮೆಟ್ಟಿಲೇರಬಹುದು ಹಾಗೂ ಕೇಂದ್ರ ಸರಕಾರ ಏನು ಮಾಡಿದೆ ಎಂದು ಮಾಹಿತಿ ನೀಡಬಹುದು. ಮೊಕದ್ದಮೆ ದಾಖಲಿಸಬಹುದು’’ ಎಂದು ಸುಪ್ರೀಂ ಕೋರ್ಟ್ ಹೇಳಿತು. ಕೇಂದ್ರ ಪರಿಸರ ಸಚಿವಾಲಯದ 2021 ಎಪ್ರಿಲ್ 1ರ ಅಧಿಸೂಚನೆ ವಿರುದ್ಧ ದಿಲ್ಲಿ ಸರಕಾರ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ದಾವೆ ಉಲ್ಲೇಖಿಸಿ ಅದು ಈ ಅಭಿಪ್ರಾಯ ವ್ಯಕ್ತಪಡಿಸಿತು.
Next Story





