ಮಂಗಳೂರಿನ ವಿವಿಧೆಡೆ ಬೆಲೆಯೇರಿಕೆಯ ವಿರುದ್ಧ ಪ್ರತಿಭಟನೆ

ಮಂಗಳೂರು, ಜು.9: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯೇರಿಕೆಯನ್ನು ಖಂಡಿಸಿ ಸಿಪಿಎಂ ನೇತೃತ್ವದಲ್ಲಿ ಶುಕ್ರವಾರ ನಗರದ ಜಪ್ಪಿನಮೊಗರು, ಜಲ್ಲಿಗುಡ್ಡ, ಕಾವೂರು, ಶಕ್ತಿನಗರ ಸಹಿತ ಹಲವು ಕಡೆಗಳಲ್ಲಿ ಪ್ರತಿಭಟನೆ ನಡೆಯಿತು.
ಜಪ್ಪಿನಮೊಗರುನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಕ್ಷದ ರಾಜ್ಯ ನಾಯಕರಾದ ಜೆ.ಬಾಲಕೃಷ್ಣ ಶೆಟ್ಟಿ, ಜಿಲ್ಲಾ ನಾಯಕರಾದ ಜಯಂತಿ ಶೆಟ್ಟಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳನ್ನು ಖಂಡಿಸಿ ಮಾತನಾಡಿದರು.
ಬಜಾಲ್ ವಾರ್ಡಿನ ಜಲ್ಲಿಗುಡ್ಡಯಲ್ಲಿ ಜರುಗಿದ ಪ್ರತಿಭಟನೆಯಲ್ಲಿ ಪಕ್ಷದ ಮಂಗಳೂರು ನಗರ ನಾಯಕರಾದ ಸುನೀಲ್ ಕುಮಾರ್ ಬಜಾಲ್, ಸುರೇಶ್ ಬಜಾಲ್ ಮಾತನಾಡಿದರು.
ಶಕ್ತಿನಗರದಲ್ಲಿ ಜರುಗಿದ ಪ್ರತಿಭಟನೆಯಲ್ಲಿ ಸಿಪಿಎಂ ಮುಖಂಡರಾದ ಜೆ.ಬಾಲಕೃಷ್ಣ ಶೆಟ್ಟಿ, ಶಶಿಧರ್ ಶಕ್ತಿನಗರ ಮಾತನಾಡಿದರು.
ಕಾವೂರಿನಲ್ಲಿ ಜರುಗಿದ ಪ್ರತಿಭಟನೆಯಲ್ಲಿ ಪಕ್ಷದ ಮಂಗಳೂರು ನಗರ ಉತ್ತರ ಕಾರ್ಯದರ್ಶಿ ದಯಾನಂದ ಶೆಟ್ಟಿ, ನವೀನ್ ಕೊಂಚಾಡಿ ಮಾತನಾಡಿದರು.
ನಗರದ ವಿವಿಧ ಕಡೆಗಳಲ್ಲಿ ಜರುಗಿದ ಪ್ರತಿಭಟನೆಯ ನೇತೃತ್ವವನ್ನು ಪಕ್ಷದ ಮುಖಂಡರಾದ ಜಯಲಕ್ಷ್ಮಿ, ಬೇಬಿ ಶೇಣವ, ಹೇಮಾವತಿ, ಬಶೀರ್ ಜಲ್ಲಿಗುಡ್ಡ, ಉಮ್ಮರಬ್ಬ, ಮೋಹನ್, ಉಮೇಶ್ ಶಕ್ತಿನಗರ, ರವಿಚಂದ್ರ ಕೊಂಚಾಡಿ, ತಿಮ್ಮಯ್ಯ, ಸಂತೋಷ್ ಡಿಸೋಜ, ಮುಸ್ತಫಾ, ನೌಷಾದ್ ಪಂಜಿಮೊಗರು ವಹಿಸಿದ್ದರು.







