ಪಾನ್‍ಮಸಾಲಾ ಮಾಲಕನಿಗೆ ಲಂಚ ನೀಡುವಂತೆ ಬೇಡಿಕೆ ಆರೋಪ: ಪಿಎಸ್ಸೈ, ಪೇದೆಗಳಿಬ್ಬರು ಎಸಿಬಿ ಬಲೆಗೆ

ಬೆಳಗಾವಿ, ಜು.9: ಪಾನ್‍ಮಸಾಲಾ ಕಾರ್ಖಾನೆ ಮಾಲಕರಿಂದ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆರೋಪ ಸಂಬಂಧ ಪೊಲೀಸ್ ಠಾಣೆಯ ಪಿಎಸ್ಸೈ, ಇಬ್ಬರು ಪೇದೆಗಳು ಎಸಿಬಿ ಬಲೆಗೆ ಬಿದಿದ್ದಾರೆ.
ಇಲ್ಲಿನ ಚಿಕ್ಕೋಡಿ ತಾಲೂಕಿನ ಸದಲಗಾ ಠಾಣೆಯ ಪಿಎಸ್ಸೈ ಕುಮಾರ ಹಿತ್ತಲಮನಿ ಹಾಗೂ ಕಾನ್ ಸ್ಟೆಬಲ್‍ಗಳಾದ ಮಾಯಪ್ಪ ಗಡ್ಡೆ ಮತ್ತು ಶ್ರೀಶೈಲ ಮಂಗಿ ವಿರುದ್ಧ ಎಸಿಬಿ ಪ್ರಕರಣ ದಾಖಲಿಸಿದೆ.
ನೆರೆಯ ಮಹಾರಾಷ್ಟ್ರದಿಂದ ಬೋರಗಾಂವಕ್ಕೆ ಬಂದಿರುವ ಕಂಪೆನಿಯವರಿಗೆ, ಅನಧಿಕೃತವಾಗಿ ಪಾನ್ ಮಸಾಲಾ ಕಾರ್ಖಾನೆ ನಡೆಸುತ್ತಿದ್ದೀರಿ ಎಂದು ಬೆದರಿಸಿ, ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ನೀಡಿದ ದೂರಿನ್ವಯ ಎಸಿಬಿ ತನಿಖಾಧಿಕಾರಿಗಳು ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಕಾರ್ಯಾಚರಣೆ ವೇಳೆ ಪೊಲೀಸ್ ಠಾಣೆಯಲ್ಲಿ 40 ಸಾವಿರ ಲಂಚ ಪಡೆಯುವಾಗ ಕಂಡುಬಂದಿದ್ದು, ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ ಎಂದು ಎಸಿಬಿ ತಿಳಿಸಿದೆ.
Next Story





