ಶಿಕ್ಷಣದಲ್ಲಿ ಜಾತಿ ಮೀಸಲಾತಿಯ ಅವಧಿ ಮುಗಿಯುವ ಕಾಲ ಮಿತಿ ನಿಗದಿಗೆ ಕೋರಿದ ಮನವಿ ತಿರಸ್ಕರಿಸಿದ ಸುಪ್ರೀಂ

ಹೊಸದಿಲ್ಲಿ, ಜು. 9: ಶಿಕ್ಷಣದಲ್ಲಿ ಜಾತಿ ಆಧಾರಿತ ಮೀಸಲಾತಿಯ ಅವಧಿ ಮುಗಿಯುವ ಕಾಲಮಿತಿ ನಿಗದಿಪಡಿಸಲು ನಿರ್ದೇಶನ ನೀಡುವಂತೆ ಕೋರಿ ಎಂಬಿಬಿಎಸ್ ವೈದ್ಯರೊಬ್ಬರು ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಳ್ಳಿ ಹಾಕಿದೆ.
ಎಂಬಿಬಿಎಸ್ ವೈದ್ಯ ಡಾ. ಸುಭಾಶ್ ವಿಜಯರಾನ್ ಅವರ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಲ್. ನಾಗೇಶ್ವರ ರಾವ್ ನೇತೃತ್ವದ ಹಾಗೂ ನ್ಯಾಯಮೂರ್ತಿ ಶ್ರೀಪತಿ ರವೀಂದ್ರ ಭಟ್ ಅವರನ್ನು ಒಳಗೊಂಡ ನ್ಯಾಯಪೀಠ, ‘‘ಕ್ಷಮಿಸಿ, ಈ ಮನವಿಯ ಮೇಲೆ ನಾವು ಯಾವುದೇ ಆದೇಶ ಜಾರಿಗೊಳಿಸಲು ಬಯಸಲಾರೆವು’’ ಎಂದು ಹೇಳಿತು. ಡಾ. ಸುಭಾಶ್ ಅವರು ತಮ್ಮ ಮನವಿ ಹಿಂಪಡೆದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಮನವಿ ತಿರಸ್ಕರಿಸಿತು. ಅಲ್ಲದೆ, ಮನವಿಯ ಮೇಲೆ ಯಾವುದೇ ಆದೇಶ ನೀಡಲಿಲ್ಲ. ಶಿಕ್ಷಣದಲ್ಲಿ ಜಾತಿ ಆಧಾರಿತ ಮೀಸಲಾತಿಯ ಅವಧಿ ಮುಗಿಯುವ ಕಾಲ ಮಿತಿ ನಿಗದಿಪಡಿಸಲು ಸೂಕ್ತ ನಿರ್ದೇಶನ ನೀಡುವಂತೆ ಕೋರಿ ದೂರುದಾರ ಡಾ. ಸುಭಾಷ್ ಉಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು.
Next Story





