ಕೋವಿಡ್ ಲಸಿಕೆಯ 1.73 ಕೋಟಿಗೂ ಅಧಿಕ ಡೋಸ್ ರಾಜ್ಯಗಳು, ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯ: ಕೇಂದ್ರ ಸರಕಾರ

ಹೊಸದಿಲ್ಲಿ, ಜು. 9: ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆಯ ಬಳಸದ ಹಾಗೂ ಬಾಕಿ ಇರುವ 1.73 ಕೋಟಿಗೂ ಅಧಿಕ ಡೋಸ್ ಗಳು ಲಭ್ಯವಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಹೇಳಿದೆ.
ಎಲ್ಲ ಮೂಲಗಳ ಮೂಲಕ ಇದುವರೆಗೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕೆಯ 38.54 ಕೋಟಿಗೂ ಅಧಿಕ ಡೋಸ್ಗಳನ್ನು ಪೂರೈಸಲಾಗಿದೆ. ವ್ಯರ್ಥ್ಯ ಸೇರಿದಂತೆ ಲಸಿಕೆಯ ಒಟ್ಟು ಉಪಭೋಗ 36,80,68,124 ಎಂದು ಅದು ತಿಳಿಸಿದೆ.
ಕೋವಿಡ್ ಲಸಿಕೀಕರಣದ ಸಾರ್ವತ್ರಿಕೀಕರಣ ನೂತನ ಹಂತ ಜೂನ್ 21ರಂದು ಆರಂಭವಾಗಲಿದೆ.
Next Story





