ಭಾರತ: 24 ಗಂಟೆಯಲ್ಲಿ 42,766 ಹೊಸ ಪ್ರಕರಣ ದಾಖಲು
ಹೊಸದಿಲ್ಲಿ, ಜು.10: ಶನಿವಾರ ಬೆಳಗ್ಗಿನವರೆಗಿನ ಕಳೆದ 24 ಗಂಟೆಯ ಅವಧಿಯಲ್ಲಿ ಭಾರತದಲ್ಲಿ ಕೊರೋನ ಸೋಂಕಿನ 42,766 ಹೊಸ ಪ್ರಕರಣ ದಾಖಲಾಗಿದ್ದು ಈ ಅವಧಿಯಲ್ಲಿ 1,200ಕ್ಕೂ ಅಧಿಕ ಸಾವಿನ ಪ್ರಕರಣ ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.
ಇದರೊಂದಿಗೆ ಒಟ್ಟು ಪ್ರಕರಣ 3,07,95,716ಕ್ಕೇರಿದ್ದು ಸಕ್ರಿಯ ಪ್ರಕರಣ 4,55,033ಕ್ಕೆ ಇಳಿದಿದೆ. ಇದುವರೆಗೆ ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 4,07,145ಕ್ಕೇರಿದೆ. ಒಟ್ಟು ಪ್ರಕರಣಗಳ 1.48%ರಷ್ಟು ಸಕ್ರಿಯ ಪ್ರಕರಣಗಳಿದ್ದರೆ ರಾಷ್ಟ್ರೀಯ ಚೇತರಿಕೆ ಪ್ರಮಾಣ 97.20% ಆಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಶುಕ್ರವಾರ 19,55,225 ಸೋಂಕು ಪರೀಕ್ಷೆ ನಡೆಸಿದ್ದು, ಇದರೊಂದಿಗೆ ದೇಶದಲ್ಲಿ ನಡೆಸಿರುವ ಒಟ್ಟು ಪರೀಕ್ಷೆಯ ಪ್ರಮಾಣ 42,90,41,970ಕ್ಕೆ ತಲುಪಿದೆ. ದೈನಂದಿನ ಸಕ್ರಿಯ ಪ್ರಮಾಣ 2.19% ದಾಖಲಾಗಿದ್ದು ಸತತ 19 ದಿನ 3%ಕ್ಕಿಂತ ಕಡಿಮೆ ಪ್ರಮಾಣ ದಾಖಲಾಗಿದೆ. ಸೋಂಕಿನಿಂದ ಚೇತರಿಸಿಕೊಂಡವರ ಪ್ರಮಾಣ 2,99,33,538ಕ್ಕೇರಿದ್ದು ಇದುವರೆಗೆ 37.21 ಕೋಟಿ ಡೋಸ್ ಲಸಿಕೆ ನೀಡಲಾಗಿದೆ ಎಂದು ಇಲಾಖೆ ಹೇಳಿದೆ.





