"ಹಿಂದೂ ಯುವತಿಯೊಂದಿಗೆ ಸ್ವಧರ್ಮದ ಯುವಕ ಸುಳ್ಳು ಹೇಳುವುದೂ ʼಜಿಹಾದ್ʼ, ಅದರ ವಿರುದ್ಧ ಹೊಸ ನಿಯಮ ಜಾರಿಗೊಳಿಸಲಾಗುವುದು"
ಅಸ್ಸಾಂ ಸಿಎಂ ಹಿಮಾಂತ ಬಿಸ್ವ ಶರ್ಮಾ ಹೇಳಿಕೆ

ಗುವಾಹಟಿ: ಹಿಂದೂ ಯುವತಿಯೊಂದಿಗೆ ಹಿಂದೂ ಯುವಕ ಸುಳ್ಳು ಹೇಳುವುದು ಕೂಡಾ ಜಿಹಾದ್ ಆಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ ಹೇಳಿಕೆ ನೀಡಿದ್ದಾರೆ. ಇದರ ವಿರುದ್ಧ ನಮ್ಮ ಸರಕಾರ ನೂತನ ನಿಯಮವೊಂದನ್ನು ಜಾರಿಗೆ ತರಲಿದೆ ಎಂದೂ ಈ ಸಂದರ್ಭದಲ್ಲಿ ಅವರು ಹೇಳಿದರು.
"ಹಿಂದುತ್ವವು 5,000 ವರ್ಷ ಹಳೆಯದು ಮತ್ತು ಜೀವನ ವಿಧಾನವಾಗಿದೆ. ಹೆಚ್ಚಿನ ಧರ್ಮಗಳ ಅನುಯಾಯಿಗಳು ಹಿಂದೂಗಳ ವಂಶಸ್ಥರು" ಎಂದು ಅವರು ಹೇಳಿದರು.
ಅಸ್ಸಾಂನಲ್ಲಿ ಕೋವಿಡ್-19 ರ ಯಾವುದೇ ಡೆಲ್ಟಾ ಪ್ಲಸ್ ರೂಪಾಂತರ ವರದಿಯಾಗಿಲ್ಲ ಎಂದು ಹೇಳಿದ ಅವರು, "ಈಗಿನಂತೆ, ಅಸ್ಸಾಂನಲ್ಲಿ ಕೋವಿಡ್-19 ರ ಡೆಲ್ಟಾ ಪ್ಲಸ್ ರೂಪಾಂತರವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಈಶಾನ್ಯ ರಾಜ್ಯಗಳಲ್ಲಿ ವ್ಯಾಕ್ಸಿನೇಷನ್ ಸ್ಥಿತಿಯ ಕುರಿತು ಸಭೆ ನಡೆಸಲಿದ್ದಾರೆ ಎಂದು ಅವರು ಹೇಳಿದರು.
ನೆರೆಯ ರಾಜ್ಯಗಳೊಂದಿಗಿನ ಗಡಿ ಉದ್ವಿಗ್ನತೆಯ ಬಗ್ಗೆ ಮಾತನಾಡಿದ ಶರ್ಮಾ, "ಅಸ್ಸಾಂ-ನಾಗಾಲ್ಯಾಂಡ್ ಮತ್ತು ಅಸ್ಸಾಂ-ಮಿಜೋರಾಂ ಗಡಿಗಳಲ್ಲಿ ಕೆಲವು ಉದ್ವಿಗ್ನತೆ ನಡೆಯುತ್ತಿದೆ. ನಮ್ಮ ಸಾಂವಿಧಾನಿಕ ಗಡಿಯನ್ನು ರಕ್ಷಿಸಲು ಅಸ್ಸಾಂ ಪೊಲೀಸರನ್ನು ನಿಯೋಜಿಸಲಾಗಿದೆ. ಈಶಾನ್ಯದ ಹೆಬ್ಬಾಗಿಲಾಗಿರುವ ನಾವು ಚರ್ಚೆಗಳಿಗಾಗಿ ಯಾವಾಗಲೂ ತೆರೆದಿರುತ್ತೇವೆ ಆದರೆ ನಮ್ಮ ಭೂಮಿಯನ್ನು ಅತಿಕ್ರಮಿಸಬೇಡಿ." ಎಂದು ಅವರು ಹೇಳಿದರು.





