ಜು.16:ಸ್ಪೈಸ್ ಜೆಟ್ ನಿಂದ ಮಧ್ಯಪ್ರದೇಶಕ್ಕೆ ಎಂಟು ನೂತನ ವಿಮಾನ ಯಾನಗಳ ಆರಂಭ
ಹೊಸದಿಲ್ಲಿ, ಜು.11: ಸ್ಪೈಸ್ ಜೆಟ್ ಜು.16ರಿಂದ ಮಹಾರಾಷ್ಟ್ರ ಮತ್ತು ಗುಜರಾತಿನಿಂದ ಮಧ್ಯಪ್ರದೇಶಕ್ಕೆ ಹೊಸದಾಗಿ ಎಂಟು ವಿಮಾನಯಾನಗಳನ್ನು ಆರಂಭಿಸಲಿದೆ ಎಂದು ನಾಗರಿಕ ವಾಯುಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಅವರು ರವಿವಾರ ಟ್ವೀಟಿಸಿದ್ದಾರೆ.
ಗ್ವಾಲಿಯರ್-ಮುಂಬೈ, ಗ್ವಾಲಿಯರ್-ಪುಣೆ, ಜಬಲ್ಪುರ-ಸೂರತ್ ಮತ್ತು ಗ್ವಾಲಿಯರ್-ಅಹ್ಮದಾಬಾದ್ ನಡುವೆ ಹೊಸ ವಿಮಾನಯಾನಗಳು ಆರಂಭಗೊಳ್ಳಲಿವೆ.
ಪ್ರಾದೇಶಿಕ ಸಂಪರ್ಕ ಯೋಜನೆ ಉಡಾನ್ ಅನ್ನು ಹೊಸ ಎತ್ತರಕ್ಕೊಯ್ಯಲು ನಾಗರಿಕ ವಾಯುಯಾನ ಸಚಿವಾಲಯ ಮತ್ತು ವೈಮಾನಿಕ ಉದ್ಯಮ ಬದ್ಧವಾಗಿವೆ ಎಂದು ಅವರು ಹೇಳಿದ್ದಾರೆ.
Next Story





