ಕೆ.ಆರ್.ಎಸ್. ಡ್ಯಾಮ್ ಬಿರುಕು ವಿಚಾರದ ಬಗ್ಗೆ ತಜ್ಞರು ಪರೀಕ್ಷೆ ನಡೆಸಲಿ: ಶಾಸಕ ಎನ್.ಮಹೇಶ್ ಆಗ್ರಹ

ಮೈಸೂರು,ಜು.11: ಕೆ.ಆರ್.ಎಸ್ ಡ್ಯಾಮ್ ಬಿರುಕು ಅನ್ನೋದು ಸೂಕ್ಷ್ಮ ವಿಚಾರ. ಈ ಬಗ್ಗೆ ಸರ್ಕಾರದ ತಜ್ಞರು ಈ ಬಗ್ಗೆ ಪರೀಕ್ಷೆ ನಡೆಸಬೇಕು ಎಂದು ಶಾಸಕ ಎನ್.ಮಹೇಶ್ ಆಗ್ರಹಿಸಿದರು.
ನಗರದ ಎನ್.ಟಿ.ಎಂ ಶಾಲೆ ಉಳಿಸಿ ಹೋರಾಟ ಸಮಿತಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ರವಿವಾರ ಭಾಗವಹಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಲಸಂಪನ್ಮೂಲ ಇಲಾಖೆ ಇದೆ. ನೀರಾವರಿ ತಜ್ಞರಿದ್ದಾರೆ ಅವರು ಪರೀಕ್ಷೆ ಮಾಡಿ ಅಭಿಪ್ರಾಯ ತಿಳಿಸಬೇಕು ಎಂದು ಹೇಳಿದರು.
ಈಗಾಗಲೇ ತಜ್ಞರು ಕೂಡ ಯಾವುದೇ ಬಿರುಕಿಲ್ಲ ಎಂದು ಹೇಳಿದ್ದಾರೆ. ಆದರೂ ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಬೇಕು, ಈ ಬಗ್ಗೆ ರಾಜಕೀಯ ಮಾಡಬಾದು. ಅಣೆಕಟ್ಟು ವಿಚಾರದಲ್ಲಿ ಅಂಬರೀಶ್ ಸಾವಿನ ಪ್ರಸ್ತಾಪ ವಿಚಾರ ಸರಿಯಲ್ಲ. ಅವರು ಯಾವ ಪಕ್ಷದಲ್ಲಿದ್ದರೂ ಎಲ್ಲರ ಜೊತೆ ಚೆನ್ನಾಗಿದ್ದರು. ಅವರ ಹೆಸರನ್ನು ಮಧ್ಯೆ ತಂದು ರಾಜಕಾರಣ ಮಾಡಬಾರದು ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಪಾಳಮೋಕ್ಷ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಚುನಾವಣೆ ಬಂದಾಗ ಕಾರ್ಯಕರ್ತರ ಕಾಲು ಹಿಡಿದುಕೊಳ್ಳುತ್ತೀರ. ಈಗ ಹೊಡೆಯೋದು ಸರಿಯಲ್ಲ. ಕಾರ್ಯಕರ್ತರು ಪ್ರೀತಿ ವಿಶ್ವಾಸದಿಂದ ಬರುತ್ತಾರೆ. ಅಂತರವನ್ನು ಪ್ರೀತಿಯಿಂದ ಕಾಣಬೇಕು. ಈ ರೀತಿ ವರ್ತಿಸೋದು ಸರಿಯಲ್ಲ ಎಂದು ಹೇಳಿದರು.





