ಪ್ರತ್ಯೇಕ ರಾಜ್ಯ ರೂಪಿಸುವ ಬಿಜೆಪಿ ಯತ್ನ ವದಂತಿ: ತಮಿಳುನಾಡಿನಲ್ಲಿ ಭುಗಿಲೆದ್ದ ವಿವಾದ

ಹೊಸದಿಲ್ಲಿ: ಕೊಂಗುವಲಯ ಎಂದು ಕರೆಯಲಾಗುವ ರಾಜ್ಯದ ಪಶ್ಚಿಮವಲಯವನ್ನು ವಿಭಜಿಸಿ ಕೊಂಗು ನಾಡು ರೂಪಿಸುವ ಕೇಂದ್ರ ಸರಕಾರದ ಯೋಜನೆಯ ಕುರಿತಂತೆ ವರದಿಗಳ ಬಗ್ಗೆ ತಮಿಳುನಾಡಿನಲ್ಲಿ ಹೊಸ ವಿವಾದ ಭುಗಿಲೆದ್ದಿದೆ ಎಂದು Hindustan Times ವರದಿ ಮಾಡಿದೆ.
ಡಿಎಂಕೆ ಇದಕ್ಕೆ ಯಾಕೆ ಹೆದರುತ್ತದೆ. ತಮಿಳುನಾಡಿನ ಹಲವು ಸ್ಥಳಗಳು ನಾಡು ಎಂಬ ಪದದಿಂದ ಕೊನೆಯಾಗುತ್ತದೆ ಎಂದು ಪತ್ರಕರ್ತರ ಉಪಸ್ಥಿತಿಯಲ್ಲಿ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕ ನೈನಾರ್ ನಾಗೇಂದ್ರನ್ ಹೇಳಿದ್ದಾರೆ.
ಆದರೆ, ಆಂಧ್ರಪ್ರದೇಶ ಹಾಗೂ ಉತ್ತರಪ್ರದೇಶವನ್ನು ಎರಡು ವಿಭಾಗವಾಗಿ ಮಾಡಿರುವುದು ನಾವು ಗಮನದಲ್ಲಿರಿಸಬೇಕು. ವಿಭಜನೆ ರಾಜ್ಯದ ಜನತೆಯ ಆಕಾಂಕ್ಷೆಯಾಗಿದ್ದರೆ, ಸರಕಾರವು ಅದನ್ನು ಪೂರೈಸಬೇಕು ಎಂದು ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ನಾಗರಾಜನ್ ಹೇಳಿದ್ದಾರೆ.
ಬುಧವಾರ ಹೊಸ ಸಂಪುಟ ಸದಸ್ಯರ ವಿವರಗಳನ್ನು ಬಿಡುಗಡೆ ಮಾಡಿದ ಬಳಿಕ ಕೇಂದ್ರ ಸರಕಾರವು ರಾಜ್ಯದ ಪಶ್ಚಿಮವಲಯ ಪ್ರದೇಶವನ್ನು ಪ್ರತ್ಯೇಕ ರಾಜ್ಯ ಇಲ್ಲವೇ ಕೇಂದ್ರಾಡಳಿತ ಪ್ರದೇಶವನ್ನಾಗಿ ರೂಪಿಸುವ ವದಂತಿ ಹಬ್ಬಿದೆ. ಕೇಂದ್ರ ಸಂಪುಟದಲ್ಲಿ ಸೇರ್ಪಡೆಯಾಗಿರುವ ನಿರ್ಗಮನ ಬಿಜೆಪಿ ಅಧ್ಯಕ್ಷ ಎಲ್. ಮುರುಗನ್ ಅವರು ತಮಿಳುನಾಡಿನ ಕೊಂಗುನಾಡಿನಿಂದ ಬಂದಿದ್ದಾರೆ ಎಂದು ನಮೂದಿಸಲಾಗಿದೆ.
ನರೇಂದ್ರ ಮೋದಿ ನೇತೃತ್ವದ ಸರಕಾರವನ್ನು ಒಕ್ಕೂಟ ಸರಕಾರ ಎಂದು ಡಿಎಂಕೆ ಸರಕಾರ ಶಿಫಾರಸು ಮಾಡಿರುವುದಕ್ಕೆ ಪ್ರತಿಯಾಗಿ ಕೇಂದ್ರವು ವಿಭಜನೆಯ ಯೋಜನೆಯನ್ನು ಹಾಕಿಕೊಂಡಿದೆ ಎಂದು ದಿನಪತ್ರಿಕೆಯೊಂದು ಜೂನ್ 10ರಂದು ವರದಿ ಪ್ರಕಟಿಸಿತ್ತು.







